Samayanews.

Samayanews.

2024-12-24 12:30:01

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗ್ಲಾಸ್ ಬ್ರಿಡ್ಜ್ಗಳನ್ನು ಮುಚ್ಚುವಂತೆ ಆಗ್ರಹ, ಮಾಲೀಕರಿಗೆ ಹೆಚ್ಚಾದ ಆತಂಕ

ಕೊಡಗು : ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್​ಗಳ ವಿರುದ್ಧ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಇದೀಗ, ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದು, ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್​ಗಳನ್ನು ಬಂದ್​ ಮಾಡಿಸುವಂತೆ ಆಗ್ರಹಿಸಲಿದ್ದಾರೆ. 

ಕೊಡಗು ಜಿಲ್ಲೆಯ ಪ್ರವಾಸೋಧ್ಯಮ ಕಳೆದ ಕೆಲವು ತಿಂಗಳಿನಿಂದ ಹಾರಂಗಿ ಅಡ್ವೆಂಚರ್ ವಾಟರ್ ಗೇಮ್ಸ್​, ಗ್ರೇಟರ್ ರಾಜಾಸೀಟ್ ಅಡ್ವೆಂಚರ್ಸ್​ ಗೇಮ್ಸ್​ ಹೀಗೆ ಹತ್ತು ಹಲವು ಚಟುವಟಿಕೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇದೀಗ ಅವುಗಳ ಸಾಲಿಗೆ ಸೇರಿರುವುದು ಗ್ಲಾಸ್ ಬ್ರಿಡ್ಜ್​ಗಳು. ಈಗಾಗಲೇ ಜಿಲ್ಲೆಯ ಎರಡು ಕಡೆ ಗ್ಲಾಸ್ ಬ್ರಿಡ್ಜ್​ಗಳು ತಲೆ ಎತ್ತಿವೆ. ಈ ಗ್ಲಾಸ್​​ ಬ್ರಿಡ್ಜ್​ಗಳು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆದಿವೆ.

ಆದರೆ, ಭಾರೀ ಮಳೆ ಬಂದ ಸಂದರ್ಭದಲ್ಲಿ ಹಲವು ಕಡೆ ಲಘು ಭೂ ಕುಸಿತಗಳು ಸಂಭವಿಸಿದ್ದವು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜಾ ಗ್ಲಾಸ್ ಬ್ರಿಡ್ಜ್​​​ಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಆದರೆ ಇದೀಗ, ಈ ಎರಡು ಗ್ಲಾಸ್ ಬ್ರಿಡ್ಜ್​ಗಳು ಹಾಗೂ ತಲಕಾವೇರಿ ಮತ್ತು ಭಾಗಮಂಡಲ ಬಳಿಯ ಗ್ಲಾಸ್​ ಬ್ರಿಡ್ಜ್​ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಧೋಳ್ಪಾಡಿ ಯಶ್ವಂತ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

 

img
Author

Post a comment

No Reviews