30ಲಕ್ಷ ರೂ. ಹಣಕ್ಕಾಗಿ ತಾಯಿಯನ್ನೇ ಕೊಂದು ಸುಟ್ಟು ಹಾಕಿದ ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶ ಶಿಯೋಪುರ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 65 ವರ್ಷದ ಉಷಾ ಕೊಲೆಯಾದ ತಾಯಿ. 24 ವರ್ಷದ ದೀಪಕ್ ಪಚೌರಿಕೊಲೆ ಮಾಡಿರುವ ಮಗ.
ಉಷಾ ಅವರು ತನ್ನ ಬ್ಯಾಂಕ್‌ನ ಸ್ಥಿರ ಖಾತೆಯಲ್ಲಿ 30 ಲಕ್ಷ ರೂಗಳನ್ನು ಠೇವಣಿ ಇಟ್ಟಿದ್ದರು. ಈ ಹಣಕ್ಕಾಗಿ ಆಕೆಯನ್ನು ಕೊಲೆ ಮಾಡಿದ ದತ್ತುಪುತ್ರ ದೀಪಕ್, ಏನೂ ತಿಳಿಯದವನಂತೆ ಕೊತ್ವಾಲಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಆನಂದ್ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ, ಆತನ ಸಂಬಂಧಿಕರು ಮತ್ತು ನೆರೆಹೊರೆಯವರ ವಿಚಾರಣೆ ನಡೆಸಲಾಗಿತ್ತು. ಯಾವುದೆ ಸುಳಿವು ಸಿಕ್ಕಿರಲಿಲ್ಲ.ಈ ನಡುವೆ ಆರೋಪಿ ದೀಪಕ್ ವ್ಯತಿರಿಕ್ತ ಹೇಳಿಕೆಗಳನ್ನು ನೀಡಲಾರಂಭಿಸಿದಾಗ ಅನುಮಾನಗೊಂಡ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಆತ ಷೇರು ಮಾರುಕಟ್ಟೆಯಲ್ಲಿ 15 ಲಕ್ಷ ರೂ ಕಳೆದುಕೊಂಡಿದ್ದು, ಹಣದ ಅಗತ್ಯವಿತ್ತು ಎಂದಿದ್ದಾನೆ. ತನ್ನ ತಾಯಿ ಅವರ ಖಾತೆಯಲ್ಲಿ 30 ಲಕ್ಷ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರು. ಅದರಲ್ಲಿ ನನ್ನನ್ನು ನಾಮಿನಿ ಮಾಡಿದ್ದರು. ಹೀಗಾಗಿ ಅವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
Post a comment
Log in to write reviews