ಬೆಂಗಳೂರು: ಡೆಂಗ್ಯೂ, ವೈರಲ್ ಫೀವರ್ ಸೇರಿದಂತೆ ಅನೇಕ ಖಾಯಿಲೆಗಳು ಜನರನ್ನು ಕಾಡುತ್ತಿವೆ. ನಗರದಲ್ಲಿ ಮಳೆ ಹೆಚ್ಚಾಗಿರುವುದರ ಕಾರಣ ಜನರಲ್ಲಿ ಹೆಚ್ಚಿನ ಆತಂಕ ಶುರುವಾಗಿದೆ. ಜನರು ಇನ್ಮುಂದೆ ತಮ್ಮ ಚರ್ಮದ ಕಾಳಜಿ ಬಗ್ಗೆ ಕೊಂಚ ಎಚ್ಚರವಹಿಸಬೇಕಿದೆ.
ನಗರದಲ್ಲಿ ಈಗಾಗಲೇ ಜನರಿಗೆ ಎಲ್ಲಿಲ್ಲದ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿದ್ದು. ಅದರಲ್ಲೂ ಡೆಂಗ್ಯೂ (Dengue) ಪ್ರಕರಣಗಳು ಕೂಡಾ ಮಿತಿ ಮೀರುತ್ತಿವೆ. ನಿನ್ನೆಯವರೆಗೂ ನಗರದಲ್ಲಿ 8,800 ಪ್ರಕರಣಗಳು ಕಂಡು ಬಂದಿವೆ. ಇದರಿಂದ ಜನರಲ್ಲಿ ಆತಂಕ ಶುರುವಾಗಿದೆ.
ರಾಜಧಾನಿಯಲ್ಲಿ ಒಂದು ತಿಂಗಳಿನಿಂದ ಮಳೆ ಹೆಚ್ಚಾಗಿದ್ದು. ಮಕ್ಕಳು ಸೇರಿದಂತೆ ವಯಸ್ಕರಲ್ಲಿ ಫಂಗಲ್ ಇನ್ಫೆಕ್ಷನ್ ಹಾಗೂ ಸ್ಕಿನ್ ಡಿಸೀಜ್ ಸಮಸ್ಯೆ ಶುರುವಾಗಿದೆ. ಸದ್ಯ ಈ ಖಾಯಿಲೆಗಳು ಒಬ್ಬರಿಂದ ಒಬ್ಬರಿಗೆ ಸೋಂಕಿನಂತೆ ಹರಡುತ್ತಿವೆ. ಮನೆಯಲ್ಲಿ ಒಂದು ಮಗುವಿಗೆ ಈ ರೀತಿಯ ಖಾಯಿಲೆಗಳು ಕಂಡು ಬಂದರೆ ವೇಗವಾಗಿ ಎಲ್ಲರಿಗೂ ಹರಡುತ್ತಿದೆ. ಈ ಫಂಗಲ್ ಇನ್‌ಫೆಕ್ಷನ್ ಅತಿಯಾಗಿ ಚರ್ಮ ಒದ್ದೆಯಾಗಿರುವುದು, ಹಾಗೂ ಮಳೆಯಲ್ಲಿ ನೆನೆಯುವುದರಿಂದ ಹೆಚ್ಚಾಗಿ ಕಂಡು ಬರುತ್ತದೆ.
ಚರ್ಮದ ಮೇಲಿನ ಅತಿಯಾದ ತೇವಾಂಶವು ಈ ಇನ್ಫೆಕ್ಷನ್ಗೆ ಕಾರಣವಾಗಿದೆ. ಹೀಗಾಗಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದ್ದು, ಆಂಟಿಫಂಗಲ್ ಸೋಪು ಅಥವಾ ಹ್ಯಾಂಡ್‌ವಾಶ್ ಬಳಕೆ, ಮಳೆ ನೀರಿನಲ್ಲಿ ನೆನೆದು ಬಂದ ಮೇಲೆ ಸ್ನಾನ ಮಾಡುವುದು, ಕೈ ಕಾಲು ತೊಳೆಯುವುದನ್ನು ಮರೆಯದಿರಿ, ನಮ್ಮ ಸುತ್ತಲಿನ ವಾತವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸಾಧ್ಯವಾದಷ್ಟು ಗಾಯಗಳಾಗದಂತೆ ನೋಡಿಕೊಳ್ಳಿ ಹಾಗೂ ಮಕ್ಕಳಿಗೆ ಮಳೆಗಾಲ ಮುಗಿಯುವವರೆಗೂ ಕಾದಾರಿಸಿದ ಬಿಸಿ ನೀರು ಕುಡಿಸುವಂತೆ ಪೋಷಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.
ನಗರದ ಬೌರಿಂಗ್, ಕೆ.ಸಿ.ಜನರಲ್ ಆಸ್ಪತ್ರೆ ಸೇರಿದಂತೆ ಅನೇಕ ಕಡೆಗಳಲ್ಲಿ ದಿನಕ್ಕೆ 10 ಮಂದಿಯಲ್ಲಿ 2-3 ಜನರಿಗೆ ಫಂಗಲ್ ಇನ್‌ಫೆಕ್ಷನ್ ಪ್ರರಕರಣಗಳು ಕಾಣಿಸುತ್ತಿದೆ. ಜೊತೆಗೆ ಜನರು ಬಳಕೆ ಮಾಡುವ ಲೋಷನ್‌ಗಳು, ಬಾಡಿ ಕ್ರೀಂಗಳ ಬಗ್ಗೆಯೂ ನಿಗಾವಹಿಸಬೇಕಿದೆ. ಹಾಗೂ ಚರ್ಮದಲ್ಲಿ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದ್ರೂ, ಕೂಡಲೇ ವೈದ್ಯರನ್ನ ಸಂಪರ್ಕಿಸಿ ಹಾಗೂ ವೈದ್ಯರು ನೀಡುವ ಸಲಹೆಗಳನ್ನು ಪಡೆಯುವಂತೆ ಸೂಚಿಸುತ್ತಿದ್ದಾರೆ ಇಲ್ಲವಾದ್ರೆ, ಇದರಿಂದ ಮತ್ತಷ್ಟು ಬೇರೆಯ ಚರ್ಮದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.
ಒಟ್ನಲ್ಲಿ ಬೆಂಗಳೂರಿನಲ್ಲಿ ಬಿಟ್ಟು ಬಿಟ್ಟು ಬರ್ತಿರೋ ಮಳೆಯಿಂದ ಕೇವಲ ಡೆಂಗ್ಯೂ ಮಾತ್ರವಲ್ಲದೆ, ಬೇರೆ ಸಮಸ್ಯೆಗಳು ಕಂಡು ಬರ್ತಿದ್ದು, ಜನರು ಈ ಬಗ್ಗೆ ಗಮನ ಹರಿಸಬೇಕಿದೆ.
Post a comment
Log in to write reviews