ಜಗತ್ತು
ಮಿಸ್ ಇಂಡಿಯಾ ವರ್ಲ್ಡ್ವೈಡ್ ಗೆದ್ದ ಭಾರತ ಮೂಲದ ಧ್ರುವಿ ಪಟೇಲ್
ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಧ್ರುವಿ ಪಟೇಲ್ ಅವರು ಮಿಸ್ ಇಂಡಿಯಾ ವರ್ಲ್ಡ್ವೈಡ್ 2024ರ (Miss India Worldwide 2024) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗೆ ನ್ಯೂಜೆರ್ಸಿಯ ಎಡಿಸನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರನ್ನು ಘೋಷಿಸಲಾಯಿತು.
ಇದರಲ್ಲಿ ಧ್ರುವಿ ಮಿಸ್ ಇಂಡಿಯಾ ವರ್ಲ್ಡ್ವೈಡ್ ಕಿರೀಟ ತಮ್ಮದಾಗಿಕೂಂಡಿದ್ದು, ನೆದರ್ರ್ಲ್ಯಾಂಡ್ಸ್ನ ಶ್ರೇಯಾ ಸಿಂಗ್ ಮತ್ತು ಸುರಿನಾಮ್ನ ಶ್ರ ಧಾಟೆಡ್ಜೋ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ.
ಪ್ರಶಸ್ತಿ ಬಳಿಕ ಮಾತನಾಡಿದ ಧ್ರುವಿಪಟೇಲ್,ತನಗೆ ಬಾಲಿವುಡ್ ನಟಿ ಮತ್ತು UNICEF ರಾಯಭಾರಿಯಾಗುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಇದು ನನಗೆ ಜಾಗತಿಕವಾಗಿ ಸಿಕ್ಕ ಮನ್ನಣೆ. ಮಿಸ್ ಇಂಡಿಯಾ ವರ್ಲ್ಡ್ವೈಡ್ ಗೆಲ್ಲುವುದು ಅತ್ಯಂತ ಗೌರವವಾಗಿದೆ. ಇದು ಮಿಸ್ ವರ್ಲ್ಡ್ವೈಡ್ ಗಿಂತಲೂ ಹೆಚ್ಚಿನ ಗೌರವ ಅನಿಸಿದೆ ಎಂದಿದ್ದಾರೆ.
Post a comment
Log in to write reviews