ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನೂರಕ್ಕೂ ಹೆಚ್ಚು ಸ್ಥಳಗಳಿಗೆ ನೇರವಾಗಿ ಸಂಪರ್ಕಿಸುವ ಸೌಲಭ್ಯವನ್ನು ಕಲ್ಪಿಸಿದೆ.
" ಬೆಂಗಳೂರು ವಿಮಾನ ನಿಲ್ದಾಣದಿಂದ ನೂರಾರು ಸ್ಥಳಗಳಿಗೆ ತಡೆರಹಿತ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ನೈಸರ್ಗಿಕ ಹೆಬ್ಬಾಗಿಲು ಆಗುವ ನಮ್ಮ ಪ್ರಯಾಣದಲ್ಲಿ 100 ಗಮ್ಯಸ್ಥಾನಗಳನ್ನು ತಲುಪುವುದು ಗಮನಾರ್ಹ ಸಾಧನೆಯಾಗಿದೆ" ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (BIAL) ನ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಹೇಳಿದ್ದಾರೆ.
BIALಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯನ್ನು ಮಾಡುತ್ತದೆ. ತಡೆ ರಹಿತ ಸಂಪರ್ಕದ 100 ಪ್ರದೇಶಗಳಲ್ಲಿ 72 ದೇಶೀಯ ಮತ್ತು 28 ಅಂತರರಾಷ್ಟ್ರೀಯ ಸ್ಥಳಗಳಾಗಿವೆ. ಈ ಪೈಕಿ ಇಂಡಿಗೋದ ಜಬಲ್ಪುರಕ್ಕೆ ವಿಮಾನ ನಿಲ್ದಾಣವು ಇತ್ತೀಚಿನ ಸೇರ್ಪಡೆಯಾಗಿದೆ.
ಜನರೇಟಿವ್ ಎಐನಲ್ಲಿ ಕೌಶಲ್ಯಕ್ಕಾಗಿ ಕರ್ನಾಟಕದೊಂದಿಗೆ ಮೈಕ್ರೋಸಾಫ್ಟ್ ಒಪ್ಪಂದಕ್ಕೆ ಸಹಿ "ತನ್ನ ಮೊದಲ ವರ್ಷದಲ್ಲಿ 9 ಮಿಲಿಯನ್ ಪ್ರಯಾಣಿಕರೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ, ವಿಮಾನ ನಿಲ್ದಾಣವು ಪ್ರಸ್ತುತ ಎರಡು ರನ್ವೇಗಳು ಮತ್ತು ಟರ್ಮಿನಲ್ಗಳನ್ನು ಹೊಂದುವ ಮೂಲಕ ಮತ್ತಷ್ಟು ಅಭಿವೃದ್ದಿಗೊಂಡಿದೆ. ವಾರ್ಷಿಕವಾಗಿ 40 ಮಿಲಿಯನ್ ಪ್ರಯಾಣಿಕರು ಮತ್ತು 465,000 ಮೆಟ್ರಿಕ್ ಟನ್ ಸರಕುಗಳನ್ನು ನಿರ್ವಹಿಸುತ್ತದೆ. ಮುಂದಿನ ದಶಕದಲ್ಲಿ ಬಿಐಎಎಲ್ 85 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಇದಲ್ಲದೇ ಬಿಐಎಎಲ್ ವಾರ್ಷಿಕವಾಗಿ ಒಂದು ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಸರಕುಗಳನ್ನು ನಿರ್ವಹಿಸುತ್ತದೆ" ಎಂದು ರಘುನಾಥ್ ಹೇಳಿದ್ದಾರೆ.
Post a comment
Log in to write reviews