ಕರ್ನಾಟಕ
ಪ್ರದೀಪ್ ಈಶ್ವರ್ ಅವರ ತಂದೆ ಆತ್ಮಹತ್ಯೆ ಬಗ್ಗೆ ಚರ್ಚೆ
ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ಗೆ ಬಾರೀ ಮುಖಭಂಗ ಎದುರಾಗಿದ್ದು ಕೋವಿಡ್ ವಿಚಾರದಲ್ಲಿ ಸುಧಾಕರ್ ನನ್ನು ಜೈಲಿಗೆ ಕಳುಹಿಸುತ್ತೇನೆಂದು ಸವಾಲ್ ಹಾಕಿದ್ರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ನೂತನ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಬಿಜೆಪಿ ಮುಖಂಡರು ಶಾಸಕರ ನಡುವಳಿಕೆಗೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಯಕರ ಆಶೀರ್ವಾದದಿಂದ ನಗರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಾವು ಬಹುಮತದಿಂದ ಗೆದ್ದಿದ್ದೇವೆ. ಅಧಿಕೃತ ಆದೇಶದ ನಂತರ ಅಧ್ಯಕ್ಷರ ಸ್ಥಾನ ಪಡೆದುಕೊಳ್ಳುತ್ತೇವೆ. ನಗರಸಭೆ ಚುನಾವಣೆಯಲ್ಲಿ ಸಹಕಾರ ಕೊಟ್ಟ ಎಲ್ಲಾ ಸದಸ್ಯರಿಗೆ ವೈಯಕ್ತಿಕವಾಗಿ ಋಣಿಯಾಗಿರುತ್ತೇವೆ. ಕಾಂಗ್ರೆಸ್ ಸಾಕಷ್ಟು ವಿರೋಧ ವ್ಯಕ್ತಪಡಿಸಿದರು. 200 ಮೀಟರ್ ಪ್ರವೇಶ ಇಲ್ಲ ಅಂದ್ರು ಒಳಗೆ ಪ್ರವೇಶ ಮಾಡಿದ್ದಾರೆ. ಶಾಸಕರ ಭಾಷೆ ಸರಿಯಿಲ್ಲಾ ಈಗ ಸಂಸದರ ತಂದೆತಾಯಿ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾಷೆ ಬದಲಿಸದಿದ್ದರೆ ನಾವು ಅದೇ ಭಾಷೆ ಬಳಸಬೇಕಾಗುತ್ತೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಯಾವ ಸಾಧನೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಶಾಸಕ ಪ್ರದೀಪ್ ಈಶ್ವರ್ ಗೆ ಐದು ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆ ಬಹಿರಂಗ ಚರ್ಚೆಗೆ ಸವಾಲ್ ಹಾಕಿದ್ದಾರೆ. ನಗರಸಭೆಯಲ್ಲಿ ಸೋತ ಅತಾಶೆಯಲ್ಲಿ ಅವಹೇಳನಕಾರಿ ಹೇಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
1. 224 ಶಾಸಕರಲ್ಲಿ ನಾನು ಶಾಸಕ ಎಂದು ಮರೆತು ಮೈಮೇಲೆ ಬಂದಂತೆ ಮಾತನಾಡುತ್ತಾರೆ. ಅದರಲ್ಲಿ ಇವರೇ ಮೊದಲಿಗರು. ಸದಸ್ಯರನ್ನು ಕರೆತರುವ ವೇಳೆ ಸೋಲಿನ ಅತಾಶೆಯಲ್ಲಿ ಬಳಸಲಾರದ ಭಾಷೆ ಬಳಸಿದ್ದಾರೆ. ಶಾಸಕರಾದ ನೀವು ಸವಿತ ಸಮಾಜದವರು ಬಹಿಷ್ಕಾರ ಮಾಡಿದ್ದಾರೆ ಎಂದು ಹೇಳಬೇಕು. ನಾಲಿಗೆ ಮೇಲೆ ಹಿಡಿತವಿಟ್ಟು ಮಾತನಾಡಬೇಕು. ಚಿಕ್ಕಬಳ್ಳಾಪುರ ಕ್ಷೇತ್ರ ಜಿಲ್ಲೆಗೆ ಸಚಿವರು ಹಾಗೂ ಅವರ ತಂದೆಯವರ ಸಾಧನೆ ಬಹಳಷ್ಟು ಇದೆ ಅವರ ಬಗ್ಗೆ ಈ ರೀತಿ ಮಾತನಾಡಬೇಡಿ ಎಂದು ತಿಳಿಸಿದರು.
2. ತಾವು ಶಾಸಕರ ಬಳಿಕ ತಾಲೂಕಿಗೆ ಕೊಟ್ಟ ಕೊಡುಗೆ ಏನು? ಎಂದು ಶ್ವೇತ ಪತ್ರ ಹೊರಡಿಸಬೇಕು ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ತಾಕತ್ ಇದ್ರೆ ಬಹಿರಂಗ ಪಡಿಸಬೇಕು ಎಂದು ಸವಾಲ್ ಹಾಕಿದರು.
3.ಮಕ್ಕಳಿಗೆ ಬಟ್ಟೆ, ಸೀರೆ, ಅಂಬ್ಯುಲೆನ್ಸ್ ಕೊಟ್ಟೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಷ್ಟು ದಿನ ಯಾರು ಬಟ್ಟೆ ಇಲ್ಲದೇ ಓಡಾಡಿಲ್ಲಾ ಪದೇ ಪದೇ ಅದನ್ನು ಮಾತನಾಡಬೇಡಿ. ಎಂಪಿ ನಾ ಎಂಎಲ್ಎ ನಾ ಎನ್ನುತ್ತಾರೆ. 1 ವರೇ ಗೆ ನೋಡಿ ಎಂದು ಹೇಳಿ ಮತ್ತೆ ಮಾತು ಬದಲಿಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಒಂದು ಪಡೆದ್ರು ರಾಜೀನಾಮೆ ಅಂದ್ರು ಇದುವರೆಗೂ ಕೊಡಲಿಲ್ಲಾ.
4.ಅಭಿವೃದ್ಧಿ ವಿಚಾರದಲ್ಲಿ ನಿಮ್ಮದೇ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು ಎಂದು ಹೇಳಬೇಕು. ಸುಮುದಾಯ ಬಡಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲು ತಾಕತ್ ಇದ್ದೀಯಾ?
5.ದಮ್ಮು ತಾಖತ್ ಖಲೇಜಾ ಇದ್ರೆ ಬಹಿರಂಗ ಚರ್ಚೆ ಮಾಡೋಣಾ ನಿಮ್ಮ ಅಧಿಕಾರದಲ್ಲಿ ನಿಮ್ಮಕೊಡುಗೆ ನಮ್ಮ ನಾಯಕನ ಅಧಿಕಾರದಲ್ಲಿ ನಮ್ಮಕೊಡುಗೆ ಚರ್ಚೆ ಮಾಡೋಣಾ ಇದಕ್ಕೆ ನಮ್ಮ ಆಹ್ವಾನ ಮಾಡುತ್ತೀದ್ದೇವೆ. ನಿಮ್ಮ ತಂದೆಯ ಆತ್ಮಹತ್ಯೆ ಬಗ್ಗೆ ಚರ್ಚೆ ಮಾಡೋಣಾ, ಅನಾಥ ಹುಡುಗ ಎಂಬುವುದರ ಬಗ್ಗೆ ಚರ್ಚೆ ಮಾಡೋಣಾ ಎಂದರು.
ಇದೇ ರೀತಿ ಮುಂದಿನ ದಿನಗಳಲ್ಲಿ ಮಾತನಾಡಿದರೆ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಸುದ್ದಿ ಗೋಷ್ಟಿಯಲ್ಲಿ ನಗರಸಭೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮುಂಚೂಣಿಯಲ್ಲಿರುವ ಗಂಜೇದ್ರ, ನಾಗರಾಜ್ ಸೇರಿದಂತೆ ಕ್ಷೇತ್ರದ ಮಾಜಿ ಶಾಸಕ ಶಿವಾನಂದ ಸೇರಿದಂತೆ ಮತ್ತಿತ್ತರು ಭಾಗಿಯಾಗಿದ್ದರು.
Post a comment
Log in to write reviews