ಬದುಕಿರುವವರೆಗೂ ಅಧಿಕಾರದಲ್ಲಿ ಉಳಿಯಲು ಪ್ರಧಾನಿ ಮೋದಿ ಮನಸ್ಸು ಮಾಡಿದ್ದಾರೆಯೇ? ಹೌದು ಎನ್ನುತ್ತಿದೆ ಇತ್ತೀಚಿಗೆ ಅವರ ನುಡಿಗಳು.
ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಕೇಳಿದ ಪ್ರಶ್ನೆಗೆ ಹಲವು ಅರ್ಥ ಬರುವ ಹೇಳಿಕೆಯೊಂದನ್ನು ನೀಡಿದ್ದು, ಇದು ಭಿನ್ನವಾದ ಚರ್ಚೆ ಹುಟ್ಟು ಹಾಕಿದೆ. ಈ ಹೇಳಿಕೆ ಪಕ್ಷದೊಳಗೆ ಹಲವರ ಅಧಿಕಾರದ ಆಸೆ ಹಾಗೂ ಕನಸಿಗೂ ಕೊಳ್ಳಿ ಬಿದ್ದಿದೆ. ಅಲ್ಲದೆ ರಾಜಕೀಯ ವಿರೋಧಿಗಳಿಗೆ ಈ ನಿಲುವುಗಳು ಚುಚ್ಚು ಮಾತಿಗೂ ಆಹಾರವಾಗುತ್ತಿದೆ. ರಾಜಕೀಯೇತರವಾಗಿ ಹಲವು ಅಭಿಪ್ರಾಯ ಮಂಡಿಸುವಂತಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ನಿಲುವು ವ್ಯಕ್ತವಾಗಿದೆ.
ಇಷ್ಟಕ್ಕೂ ಮೋದಿ ದೈವ ಭಕ್ತ, ಅಲ್ಲದೆ ಧರ್ಮ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ಒಂದಷ್ಟು ನಿಲುವುಗಳ ಬಗ್ಗೆ ವಿದೇಶಗಳಲ್ಲೂ ಕೂಡ ವಿರೋಧಗಳಿದೆ. ಜಾತ್ಯತೀಯ ದೇಶದಲ್ಲಿ ದಿನವಹಿ ಈ ವಿಚಾರವಾಗಿ ಸುದ್ದಿಯಲ್ಲಿರುವ ಮೋದಿಯ ಈ ಮಾತುಗಳು ಹಲವು ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ.
2047ರವರೆಗೂ ಭಾರತೀಯರ ಸೇವೆ ಮಾಡಲು ದೇವರು ದೀಕ್ಷೆ ನೀಡಿದ್ದಾನೆ.
2047ರವರೆಗೆ ದೇವರೇ ತನ್ನನ್ನು ಭಾರತ ಮತ್ತು ಭಾರತೀಯರ ಸೇವೆ ಮಾಡುವಂತೆ ದೀಕ್ಷೆ ನೀಡಿ ಕಳುಹಿಸಿದ್ದಾನೆ. ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಮೂಲಕ ತಾವು ಬದುಕಿರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವ ಕುರಿತು ಸುಳಿವನ್ನು ಮೋದಿ ನೀಡಿದ್ದಾರೆ.
ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ದೇವರೇ ನನ್ನನ್ನು ವಿಶೇಷ ಕಾರ್ಯಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾನೆ. ಆ ಮೂಲಕ 2047ರೊಳಗೆ ದೇಶವನ್ನುವಿಕಸಿತ ಭಾರತವನ್ನಾಗಿ ರೂಪಿಸಬೇಕಿದೆ. ಅದಕ್ಕಾಗಿ ನನಗೆ ದಿನದ 24 ಗಂಟೆಯೂ ದುಡಿಯುವ ಶಕ್ತಿ ನೀಡುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ 2047ರೊಳಗೆದೇಶವನ್ನು ವಿಕಸಿತ ಭಾರತ ಮಾಡುವ ಗುರಿಯಲ್ಲಿ ನಾನು ಯಶಸ್ವಿಯಾಗುವೆ. ಅಲ್ಲಿಯವರೆಗೂ ದೇವರು ನನ್ನನ್ನು ಕರೆಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
- ಸಂಚಿತಾ ಬಿ.ಎಸ್ ಡಿಜಿಟಲ್ ಸಮಯ ನ್ಯೂಸ್
Post a comment
Log in to write reviews