ಬೆಂಗಳೂರು: ಡಿಕೆ ಸಹೋದರರ ಭದ್ರಕೋಟೆಯಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಬಿಜೆಪಿ, ಜೆಡಿಎಸ್ ಸೇರಿ ಆಪರೇಷನ್ ಮಾಡಿದ್ದು, ಡಾ.ಮಂಜುನಾಥ್ ಅವರ ಮೂಲಕ ಕ್ಷೇತ್ರ ಗೆದ್ದು ಯಶಸ್ವಿಯಾಗಿದೆ.
ಕಳೆದ ಹಲವು ದಶಕಗಳಿಂದ ಡಿ.ಕೆ.ಸಹೋದರರು ಈ ಕ್ಷೇತ್ರವನ್ನು ಬಿಗಿಮಷ್ಟಿಯಲ್ಲಿಟ್ಟುಕೊಂಡಿದ್ದರಲ್ಲದೆ, ಕನಕಪುರ, ರಾಮನಗರ, ಸಾತನೂರು, ರಾಜರಾಜೇಶ್ವರಿನಗರ ಹಾಗೂ ಕುಣಿಗಲ್ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಹಾಗೂ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಈ ಕ್ಷೇತ್ರದಲ್ಲಿ ಹೆಚ್ಚಾಗಿ ಪ್ರಚಾರ ನಡೆಸದೆ ದಾಖಲೆಯ ಅಂತರದ ಗೆಲುವು ದಾಖಲಿಸಿದ್ದರು. ಅಲ್ಲದೆ ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಕೂಡ ಡಿ.ಕೆ.ಸುರೇಶ್ ನಿರಾಯಾಶವಾಗಿ ಗೆದ್ದಿದ್ದರು. ಇದಲ್ಲದೆ ಈ ಭಾಗದಲ್ಲಿ ತಮ್ಮ ಪ್ರಭಾವವನ್ನು ಡಿಕೆ ಸಹೋದದರು ಹೊಂದಿದ್ದರು. ಆದರೆ ಈ ಭಾರಿ ಜೆಡಿಎಸ್ ಬೆಂಬಲಿತವಾಗಿ ಬಿಜೆಪಿ ಚಿನ್ನೆಯಿಂದ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಲಾಗಿತ್ತು. ಪ್ರಚಾರದ ಹಂತದಲ್ಲಿ ಒಂದು ಕೈ ಮೇಲೆಯೇ ಇದ್ದ ಡಿ.ಕೆ.ಸಹೋದರರಿಗೆ ಈಗ ಭಾರೀ ಹಿನ್ನಡೆಯಾಗಿದೆ. ಗ್ರಾಮಾಂತರ ಕ್ಷೇತ್ರದ ಜನ ಡಾಕ್ಟರ್ ಮಂಜುನಾಥ್ ಕೈ ಹಿಡಿದು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯರಿಗೆ ಇವೆಲ್ಲಾ ಬೇಕಾ? ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವುದು ಒಳ್ಳೆಯದು ಎಂಬ ಮಾತುಗಳು ಈ ಹಿಂದೆ ಕೇಳಿಬಂದಿತ್ತು, ಆದರೆ ಡಾ.ಮಂಜುನಾಥ್ ಇದಾವುದನ್ನೂ ಲೆಕ್ಕಿಸದೇ ಸ್ಪರ್ಧಿಸಿ ಗೆದ್ದು ಬೀಗಿದ್ದಾರೆ. ಈ ಮೂಲಕ ಡಿಕೆ ಸಹೋದರರಿಗೆ ಸೋಲಿನ ಆಘಾತ ನೀಡಿದ್ದಾರೆ.
Post a comment
Log in to write reviews