Samayanews.

Samayanews.

2024-12-24 12:49:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕಾಸ್ಮೆಟಿಕ್ ಸರ್ಜರಿ ವೇಳೆ ವೈದ್ಯರ ಎಡವಟ್ಟು, ಯುವಕ ಸಾವು

ಮಂಗಳೂರು:  ಕಾಸ್ಮೆಟಿಕ್ ಸರ್ಜರಿಯ ವೇಳೆ ವೈದ್ಯರ ಎಡವಟ್ಟಿನಿಂದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಂಕನಾಡಿಯ ಬೆಂದೂರ್ ವೆಲ್​ನಲ್ಲಿ ನಡೆದಿದೆ.

ಮೃತನನ್ನು ಉಳ್ಳಾಲದ ಅಕ್ಕರೆಕೆರೆ ನಿವಾಸಿಯಾಗಿದ್ದು 32 ವರ್ಷದ ಮೊಹ್ಮದ್ ಮಾಝಿನ್ ಎಂದು ಗುರುತಿಸಲಾಗಿದೆ. ಮೊಹ್ಮದ್ ಮಾಝಿನ್ ತನ್ನ‌ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಬೆಂದೂರ್ ವೆಲ್​ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪರೆಂಟ್ ಕ್ಲಿನಿಕ್​ಗೆ ಬಂದಿದ್ದನು.

ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಆದರೆ ಹೆಚ್ಚು ಸಮಯ ಕಳೆದರೂ ಶಸ್ತ್ರಚಿಕಿತ್ಸೆ ಮುಗಿಯದಿದ್ದರಿಂದ ಸಂಶಯಗೊಂಡ ಪೋಷಕರು ಈ ಬಗ್ಗೆ ವಿಚಾರಿಸಿದಾಗ ಆರೋಗ್ಯದಲ್ಲಿ ಏರುಪೇರು ಆಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಕೂಡಲೇ ಮಾಝೀನ್‌ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ಘೋಷಿಸಿದರು.

ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದು, ಈ ಕುರಿತು ಕದ್ರಿ‌ ಠಾಣೆ ಪೊಲೀಸರು UDR ಪ್ರಕರಣ ದಾಖಲಿಸಿಕೊಂಡಿದ್ದಾರೆ.

img
Author

Post a comment

No Reviews