ಬಳ್ಳಾರಿ : ಎಪ್ಪತ್ತು ವರ್ಷ ಇತಿಹಾಸವುಳ್ಳ ತುಂಗಾಭದ್ರಾ ಆಣೆಕಟ್ಟೆ 19ನೇ ಕ್ರಸ್ಟ್ಗೇಟ್ ಸರಪಳಿ ಕೊಂಡಿ ಶನಿವಾರ ತಡರಾತ್ರಿ ಕಿತ್ತುಕೊಂಡು ಹೋಗಿದೆ ಪರಿಣಾಮ ತುಂಗಭದ್ರಾಗೆ ದೊಡ್ಡ ಗಂಡಾಂತರ ಎದುರಾಗಿದೆ.
ಜಲಾಶಯದ ಗೇಟ್ ಸಂಖ್ಯೆ12ರಿಂದ 21 ವೆರೆಗೆ 10 ಕ್ರಸ್ಟ್ಗೇಟುಗಳನ್ನು ಎತ್ತಿ 22,890 ಕ್ಸೂಸೆಕ್ ನೀರು ಹರಿಬಿಡಲಾಗುತ್ತಿತ್ತು ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನೀರನ ರಭಸಕ್ಕೆ 60 ಅಡಿ ಎತ್ತರ 20 ಅಡಿ ಅಗಲದ ಬರೋಬ್ಬರಿ 48 ಟನ್ ತೂಕ ಸಾಮರ್ಥ್ಯದ ಗೇಟು ಕಿತ್ತು ನದಿಗೆ ಬಿದ್ದಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ಕ್ಷಣ ಭಾರಿ ಕಂಪನದ ಅನುಭವವಾಗಿದೆ.
ಡಿಸಿಎಂ ಭೇಟಿ : ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಘಟಾನ ಸ್ಥಳವನ್ನು ಪರಿಶೀಲನೆ ಮಾಡಿದ್ದು ಅಧಿಕಾರಿಗಳೊಂದಿಗೆ ತರ್ತು ಸಭೆ ನಡೆಸಿದರು. ಕೊಚ್ಚಿಹೋದ ಕ್ರಸ್ಟ್ಗೇಟು ಮರು ಅಳವಡಿಕೆ ಕಾರ್ಯವನ್ನು ಹೈದರಾಬಾದ್ನ ಕನ್ನಯ್ಯ ನಾಯ್ಡು ಎನ್ನುವ ನುರಿತ ತಜ್ಞ ಕಂಪನಿಗೆ ವಹಿಸಲಾಗಿದೆ.
Post a comment
Log in to write reviews