ಬೆಂಗಳೂರು: ರೇವ್ ಪಾರ್ಟಿ ಪ್ರಕರಣ ಸಂಬಂಧ ಆರೋಪಿಗಳಿಂದ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಆರೋಪಿ ವಾಸುಗೆ ಸ್ನೇಹಿತರಿಂದಲೇ ಡ್ರಗ್ಸ್ ಪೂರೈಕೆಯಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆಂಧ್ರದ ವಿಜಯವಾಡದ ನಾಗಬಾಬು, ರಣಧೀರ ಬಾಬು ಡ್ರಗ್ಸ್ ಪೂರೈಸಿದ ಆರೋಪಿ. ಉದ್ಯಮಿ ಗೋಪಾಲರೆಡ್ಡಿಗೆ ಸೇರಿದ್ದ ಫಾರ್ಮ ಹೌಸ್ ನಲ್ಲಿ ಗೋಪಾಲರೆಡ್ಡಿ ಸ್ನೇಹಿತ ಆಂಧ್ರ ಪ್ರದೇಶದ ವಾಸು ತನ್ನ ಹುಟ್ಟುಹಬ್ಬಕ್ಕೆಂದು ಕಟ್ಟಡ ಬಾಡಿಗೆ ಪಡೆದಿದ್ದ. ಕೋರಮಂಗಲದ ಅರುಣ್ ಎಂಬಾಂತ ಪಾರ್ಟಿ ಆಯೋಜನೆ ಮಾಡಿದ್ದ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಅರುಣ್, ರಣವೀರ್, ಮೊಹಮದ್ ಅಬೂಬುಕರ್ ಬಳಿ ಡ್ರಗ್ಸ್ ಪತ್ತೆಯಾಗಿದೆ. ಪಾರ್ಟಿಯಲ್ಲಿ 14.40 ಗ್ರಾಂ MDMA ಪಿಲ್ಸ್, 1.16 MDMA ಕ್ರಿಸ್ಟಲ್ಸ್, 6 ಗ್ರಾಂ ಹೈಡ್ರೋ ಗಾಂಜಾ, 5 ಗ್ರಾಂ ಕೊಕೇನ್ ಹಾಗೂ ಕೊಕೇನ್ ಲೇಪನ ಇರುವ 500 ರೂ.ಮುಖಬೆಲೆಯ ನೋಟು ಮತ್ತು 5 ಮೊಬೈಲ್, 1.5 ಕೋಟಿ ಮೌಲ್ಯದ ಡಿಜೆ ಉಪಕರಣ ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಫಾರ್ಮ್ ಹೌಸ್ ಮಾಲೀಕ ಸೇರಿ 103 ಮಂದಿ ಮೇಲೂ ಎಫ್ಐಆರ್ ದಾಖಲಾಗಿತ್ತು.
Post a comment
Log in to write reviews