ವಿಜಯಪುರ: ಇಂದು(ಮಂಗಳವಾರ) ಬೆಳಿಗ್ಗೆ 11-29 ನಿಮಿಷಕ್ಕೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಜೋರು ಶಬ್ದಕ್ಕೆ ಅಡುಗೆ ಮನೆಯಲ್ಲಿನ ಪಾತ್ರೆ, ಪಗಡೆಗಳು ಬಿದ್ದಿವೆ. ತಿಕೋಟ ತಾಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹುಬನೂರ ಗ್ರಾಮಗಳಲ್ಲಿ, ಹಾಗೂ ಗಡಿ ಭಾಗದ ಮಹಾರಾಷ್ಟ್ರದ ಮೊರಬಗಿ, ತಿಕ್ಕುಂಡಿ, ಆಸಂಗಿಯಲ್ಲೂ ಭೂಮಿ ನಡುಗಿದ ಭೂಕಂಪನದ ಅನುಭವವಾಗಿದೆ. ಜೋರು ಶಬ್ದಕ್ಕೆ ಜನರು ಮನೆಯಿಂದ ಹೊರಗಡೆ ಒಡೋಡಿ ಬಂದಿದ್ದಾರೆ.
Post a comment
Log in to write reviews