ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಚಿವ ಬಿ.ನಾಗೇಂದ್ರ ಅವರ ಮೊಬೈಲ್ ಅನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಂದು ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ನಿವಾಸ ಸೇರಿದಂತೆ ವಿವಿಧೆಡೆ ಇಡಿ ದಾಳಿ ನಡೆಸಿದ ಇಡಿ ತಂಡ ನಾಗೇಂದ್ರ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು 2 ಗಂಟೆಗೂ ಅಧಿಕ ವಿಚಾರಣೆ ನಡೆಸಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಕಲೆಹಾಕುತ್ತಿದ್ದು, ಫ್ಲಾಟ್ ಮತ್ತು ಮನೆಯ ಇಂಚಿಂಚೂ ಬಿಡದೇ ಪರಿಶೀಲನೆ ನಡೆಸುತ್ತಿದ್ದಾರೆ.
ಬಹುಕೋಟಿ ಹಗರಣ ಕೇಸ್ಗೆ ಸಂಬಂಧಿಸಿದಂತೆ ಬುಧವಾರ (ಜು 10) ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದ ಮರುದಿನವೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಈಗಾಗಲೇ ಶಾಸಕ ಬಸನಗೌಡ ದದ್ದಲ್, ಯ್ಯೂನಿಯನ್ ಬ್ಯಾಂಕ್ ಬ್ರಾಂಚ್ ಹೆಡ್ ದೀಪಾ ಮುಂತಾದವರ ಮನೆಗಳ ಮೇಲೂ ದಾಳಿ ನಡೆಸಿ, ವಿಚಾರಣೆ ನಡೆಸಲಾಗುತ್ತಿದೆ.
Post a comment
Log in to write reviews