ನವದೆಹಲಿ: ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ದೇಶದಲ್ಲಿ ವಿದ್ಯುತ್ ಬೇಡಿಕೆ ದಾಖಲೆಯ ಮಟ್ಟಕ್ಕೆ ಹೆಚ್ಚುತ್ತಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ರಾಜಧಾನಿ ದೆಹಲಿ ಸಹಿತ ದೇಶದ ಬಹು ಭಾಗಗಳಲ್ಲಿ ತಾಪಮಾನ ವಿಪರೀತವಾಗಿ ಹೆಚ್ಚಿದೆ. ಹೀಗಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇದಲ್ಲದೆ ತಂಪುಕಾರಕ ಸಾಧನ(ಎಸಿ) ಬಳಕೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ದೈನಂದಿನ ವಿದ್ಯುತ್ ಬೇಡಿಕೆ ದಾಖಲೆಯ 246.06 ಗಿಗಾವ್ಯಾಟ್‌ಗೆ ಮುಟ್ಟಿದೆ ಎಂದು ಇಲಾಖೆ ತಿಳಿಸಿದೆ.
ಬುಧವಾರ ಅತಿ ಹೆಚ್ಚು ವಿದ್ಯುತ್ ಅನ್ನು ಸರಬರಾಜು ಮಾಡಲಾಗಿದೆ. ಮಂಗಳವಾರ ರಂದು 237.94 ಗಿಗಾವ್ಯಾಟ್ ಆಗಿದ್ದು, ಪ್ರಸಕ್ತ ಬೇಸಿಗೆ ಕಾಲದ ಅತ್ಯಂತ ಹೆಚ್ಚು ವಿದ್ಯುತ್ ಬೇಡಿಕೆ 239.96 ಗಿಗಾವ್ಯಾಟ್ ಮೇ 24 ರಂದು ದಾಖಲಾಗಿತ್ತು ಎಂದು ಸಚಿವಾಲಯ ತಿಳಿಸಿದೆ.
Post a comment
Log in to write reviews