ಲಕ್ನೋ: ಉತ್ತರ ಪ್ರದೇಶದ ಪ್ರಬಲ ಪಕ್ಷವಾಗಿದ್ದ ಬಹುಜನ ಸಮಾಜವಾದಿ ಪಕ್ಷ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಹೆಸರಿಲ್ಲದಂತಾಗಿದೆ. ಒಂದೂ ಸ್ಥಾನ ಗೆಲ್ಲದ ಕಾರಣ ಬಿಎಸ್ಪಿ ಯುಗ ಅಂತ್ಯವಾಯಿತು ಎನ್ನಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಸ್ಪರ್ಧೆ ಮಾಡಿದ್ದ 79 ಕ್ಷೇತ್ರಗಳಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಮಕಾಡೆ ಮಲಗಿದೆ. ಒಂದು ಕಾಲದಲ್ಲಿ ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯದಲ್ಲಿ ಪ್ರಬಲವಾಗಿದ್ದ ಆನೆ ಗುರುತಿನ ಈ ಪಕ್ಷ ಇಂದು ಒಂದೂ ಸ್ಥಾನ ಗೆದ್ದಿಲ್ಲ. ಕಾನ್ಯಿರಾಂ ನಂತರ ಈ ಪಕ್ಷವನ್ನು ನಡೆಸಿದ ಮಯಾವತಿ ವರ್ಚಸ್ಸೂ ಕೂಡ ಕುಗ್ಗಿದೆ. ದೇಶಾದ್ಯಂತ 424 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಒಂದರಲ್ಲೂ ಮುನ್ನಡೆ ಸಾಧಿಸಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ 33, ಸಮಾಜವಾದಿ ಪಕ್ಷ 37, ಕಾಂಗ್ರೆಸ್ 6 , ಆರ್ಎಲ್ಡಿ 2 ಹಾಗೂ ಇತರರು 2 ಕ್ಷೇತ್ರಗಳಲ್ಲಿ ಗೆಲುವು ದಕ್ಕಿಸಿಕೊಂಡಿವೆ. ಹೀಗಾಗಿ ಮಾಯಾವತಿ ಹಾಗೂ ಬಿಎಸ್‌ಪಿ ಪಕ್ಷ ನಾಯಕತ್ವವಿಲ್ಲದೆ ಸೊರಗಿದ್ದು, ಯುಪಿಯಲ್ಲಿ ಮಾಯಾವತಿ ರಾಜಕೀಯ ಯುಗಾಂತ್ಯವಾಗಿದೆಯೆಂದು ವಿಶ್ಲೇಷಿಸಲಾಗಿದೆ.
ಮತ್ತೊಂದೆಡೆ, ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಚಂದ್ರಶೇಖರ್ ಆಜಾದ್ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ಬೆಂಬಲವಿಲ್ಲದೆ ನಗಿನಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಇದೀಗ ಅವರು ಹೊಸ ದಲಿತ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಲಾಗಿದೆ.
Post a comment
Log in to write reviews