823 ರನ್ ಸಿಡಿಸಿ ಸಾಧನೆಗೈದ ಇಂಗ್ಲೆಂಡ್: ದಾಖಲೆ ಬುಕ್ ಸೇರಿದ ಹ್ಯಾರಿ ಬ್ರೂಕ್ ತ್ರಿಶತಕ.!
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ರನ್ ಮಳೆ ಹರಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಅಬ್ಬರದ ತ್ರಿಶತಕ ಸಿಡಿಸಿದರೆ, ಜೋ ರೂಟ್ ಆಕರ್ಷಕ ದ್ವಿಶತಕದಾಟವಾಡಿದರು. ಇದರೊಂದಿಗೆ ಇಂಗ್ಲೆಂಡ್ 823 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಪಾಕ್ ಬೌಲರ್ಗಳನ್ನು ಚೆಂಡಾಡಿದ ಹ್ಯಾರಿ ಬ್ರೂಕ್ 322 ಎಸೆತಗಳಲ್ಲಿ 29 ಬೌಂಡರಿ ಮತ್ತು ಮೂರು ಸಿಕ್ಸರ್ ಸಹಾಯದಿಂದ 317 ರನ್ ಕಲೆಹಾಕಿದರು. ಜೋ ರೂಟ್ 375 ಎಸೆತಗಳಲ್ಲಿ ಆಕರ್ಷಕ 17 ಬೌಂಡರಿಗಳನ್ನು ಬಾರಿಸಿ 262 ರನ್ ಕಲೆಹಾಕಿದರು.
ದಾಖಲೆ ಬುಕ್ನಲ್ಲಿ ಬ್ರೂಕ್: ಹ್ಯಾರಿ ಬ್ರೂಕ್ 310 ಎಸೆತಗಳಲ್ಲಿ ತ್ರಿಶತಕ ಪೂರೈಸುವ ಮೂಲಕ ಟೆಸ್ಟ್ನಲ್ಲಿ ವೇಗವಾಗಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಅತಿ ವೇಗದ ತ್ರಿಶತಕದ ದಾಖಲೆ ಟೀಂ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. ಸೆಹ್ವಾಗ್ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 278 ಎಸೆತಗಳಲ್ಲಿ ತ್ರಿಶತಕ ಸಿಡಿಸಿ ಸೇಹ್ವಾಗ್ ಈ ದಾಖಲೆ ಬರೆದಿದ್ದರು.
ಬ್ರೂಕ್ ಇಂಗ್ಲೆಂಡ್ ಪರ ತ್ರಿಶತಕ ಸಿಡಿಸಿದ ಆರನೇ ಆಟಗಾರ ಎನಿಸಿಕೊಂಡರು. ಇವರಿಗಿಂತ ಮೊದಲು ಲಿಯೊನಾರ್ಡ್ ಹಟ್ಟನ್ (364), ವಾಲಿ ಹ್ಯಾಮಂಡ್ (336*), ಗ್ರಹಾಂ ಗೂಚ್ (333), ಆಂಡಿ ಸಂಧಮ್ (325) ಮತ್ತು ಜಾನ್ ಎಡ್ರಿಚ್ (310*) ಈ ಸಾಧನೆ ಮಾಡಿದ್ದರು.
ರೂಟ್ ದಾಖಲೆ: ಇಂಗ್ಲೆಂಡ್ ಪರ ಅತಿ ಹೆಚ್ಚು 250+ ಸ್ಕೋರ್ ಗಳಿಸಿದ 3ನೇ ಆಟಗಾರ ಎನಿಸಿಕೊಂಡರು. ಅಲ್ಲದೇ ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಎರಡನೇ ಮತ್ತು ಇಂಗ್ಲೆಂಡ್ನ ಮೊದಲ ಬ್ಯಾಟರ್ ಕೂಡ ಹೌದು.
ವಿಶ್ವದಾಖಲೆಯ ಜೊತೆಯಾಟ: ಜೋ ರೂಟ್-ಹ್ಯಾರಿ ಬ್ರೂಕ್ ನಾಲ್ಕನೇ ವಿಕೆಟ್‌ಗೆ 454 ರನ್‌ಗಳ ಬೃಹತ್ ಜೊತೆಯಾಟವಾಡಿದರು. ಈ ಅನುಕ್ರಮದಲ್ಲಿ, ರೂಟ್-ಬ್ರೂಕ್ ಜೋಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಜೊತೆಯಾಟವಾಡಿದ ನಾಲ್ಕನೇ ಜೋಡಿ ಎಂಬ ದಾಖಲೆ ನಿರ್ಮಿಸಿತು. ಈ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ-ಮಹೇಲಾ ಜಯವರ್ಧನೆ (624 ರನ್) ಮತ್ತು ಜಯಸೂರ್ಯ-ಮಹಾನಾಮ (576 ರನ್) ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಕ್ರೋವ್-ಆಂಡ್ರ್ಯೂ ಜೋನ್ಸ್ (467 ರನ್) ಮೂರನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ಸ್ಕೋರ್:
952/9 ಡಿ - ಶ್ರೀಲಂಕಾ, ಕೊಲಂಬೊ, 1997
903/7 ಡಿ - ಇಂಗ್ಲೆಂಡ್, ದಿ ಓವಲ್, 1938
849 - ಇಂಗ್ಲೆಂಡ್, ಕಿಂಗ್ಸ್ಟನ್, 1930
823/7 ಡಿ - ಇಂಗ್ಲೆಂಡ್, ಮುಲ್ತಾನ್, 2024*
790/3 ಡಿ - ವೆಸ್ಟ್ ಇಂಡೀಸ್, ಕಿಂಗ್ಸ್ಟನ್, 1958
Post a comment
Log in to write reviews