ಬೆಂಗಳೂರು : ನಾವು ಅಂದವಾಗಿ ಕಾಣಬೇಕು ಅಂತ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ. ತಮ್ಮ ಸೌಂದರ್ಯ ರಕ್ಷಣೆಗಾಗಿ ಲಲನೆಯರು ನಾನಾ ಸರ್ಕಸ್ ಮಾಡುತ್ತಾರೆ. ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಗುವ ಕೆಮಿಕಲ್ ಪ್ರಾಡಕ್ಟ್‌ಗಳನ್ನ ಬಳಸುತ್ತಾರೆ. ಪ್ರಾರಂಭದಲ್ಲಿ ಉತ್ತಮ ಫಲಿತಾಂಶ ಕೊಡುವ ಕ್ರೀಮ್ ಗಳು ಭವಿಷ್ಯದಲ್ಲಿ ಅಂದಕ್ಕೆ ಮಾರಕವಾಗಿ ಪರಿಣಮಿಸುತ್ತವೆ.
ಕೆಮಿಕಲ್ ರಹಿತವಾಗಿ ನೈಸರ್ಗಿಕವಾಗಿ ಕೆಲವೊಂದು ಸರಳ ವಿಧಾನಗಳ ಮೂಲಕ ನಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳುವುದು ಉತ್ತಮ.
ಸಾಮಾನ್ಯವಾಗಿ ಉಂಟಾಗುವ ಹಾರ್ಮೋನ್ ಏರಿಳಿತ, ಪರಿಸರ ಮಾಲಿನ್ಯ, ಚರ್ಮದ ಬಗ್ಗೆ ಸೂಕ್ತ ಕಾಳಜಿ ವಹಿಸದೇ ಇರುವುದು, ಅನಿಯಮಿತ ಆಹಾರ ಪದ್ಧತಿ,ಹೀಗೆ ಹಲವಾರು ಕಾರಣಗಳಿಂದ ಕಲೆಗಳು ಮುಖವನ್ನು ಆವರಿಸಿಕೊಳ್ಳುತ್ತವೆ.
ಮೊಡವೆ, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಮುಚ್ಚಿ ಹೋಗಿರುವ ಚರ್ಮದ ರಂಧ್ರಗಳ ರೂಪದಲ್ಲಿ ಈ ಕಲೆಗಳು ಕಾಣಿಸಿಕೊಳ್ಳುತ್ತವೆ. ಮುಖ, ಕುತ್ತಿಗೆ, ಭುಜ, ಬೆನ್ನುಗಳಲ್ಲಿ ಇಂತಹ ಕಲೆಗಳು ಕಂಡುಬರುತ್ತವೆ. ಇಂತಹ ಕಲೆಗಳು ನೋಡುಗರನ್ನು ಅಸಹ್ಯಗೊಳಿಸುವುದಲ್ಲದೆ ಹಲವಾರು ಸಮಸ್ಯೆಗಳನ್ನೂ ಉಂಟು ಮಾಡುತ್ತವೆ.
ಮನೆಗಳಲ್ಲೇ ಸಿಗುವ ಹಲವಾರು ಔಷಧಯುಕ್ತ ವಸ್ತುಗಳನ್ನು ಬಳಸುವುದರಿಂದ
ಈ ಸಮಸ್ಯೆಗಳಿಂದ ಹೊರಬರಲು ಸಾಧ್ಯವಿದೆ.
ನಿಂಬೆಹಣ್ಣು
ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಅಧಿಕವಾಗಿರುವುದರಿಂದ ಇದು ಚರ್ಮದಲ್ಲಿನ ಜಿಡ್ಡಿನ ಅಂಶವನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ಮೊಡವೆಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಜೊತೆಗೆ ಕಪ್ಪು ಕಲೆಯನ್ನು ನಿವಾರಸಿ ತ್ವಚೆಯನ್ನ ತಿಳಿಗೊಳಿಸುತ್ತದೆ.
ಆಲೂಗಡ್ಡೆ ಸಿಪ್ಪೆ
ಆಲೂಗಡ್ಡೆಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇವು ಕಪ್ಪು ಕಲೆಯನ್ನ ಕಡಿಮೆ ಮಾಡುವ ಮತ್ತು ನಿಮ್ಮ ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.
ಅಲೋವೆರಾ
ಅಲೋವೆರಾ ದಲ್ಲಿ ಪಾಲಿಸೆಕರೈಡ್‌ಗಳು ಹೇರಳವಾಗಿವೆ. ಇವುಗಳು ಚರ್ಮದಲ್ಲಿನ ಕಲೆ ಹಾಗೂ ಮೊಡವೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.
ಮಾವಿನಹಣ್ಣು
ಮಾವಿನಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಫೈಟೊನ್ಯೂಟ್ರಿಯೆಂಟ್‌ಗಳು, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಹೆಚ್ಚಾಗಿವೆ. ಇವು ಚರ್ಮಕ್ಕೆ ಹೊಳಪನ್ನ ನೀಡುತ್ತದೆ ಮತ್ತು ಕಪ್ಪು ಕಲೆಯನ್ನ ಹೋಗಲಾಡಿಸಲು ನೇರವಾಗುತ್ತದೆ
ಒಟ್ಟಾರೆಯಾಗಿ ನಾವು ದಿನನಿತ್ಯ ಬಳಸುವ ತರಕಾರಿ ಹಣ್ಣುಗಳಿಂದ ಮನೆಯಲ್ಲೇ ತ್ವಚೆಯ ಆರೈಕೆಯನ್ನು ಮಾಡಬಹುದಾಗಿದೆ.
Post a comment
Log in to write reviews