ಕಸ ವಿಲೇವಾರಿಗೆ ಜೂನ್ ೧ ರಿಂದ "ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ" ಸಂಸ್ಥೆ ಸ್ಥಾಪನೆ.
ಇನ್ನು ಮುಂದೆ ನಗರದಲ್ಲಿ ಕಸದ ಸಮಸ್ಯೆಗೆ ಬಿಬಿಎಂಪಿ ಯನ್ನು ಪ್ರಶ್ನಿಸೊಹಾಗಿಲ್ಲ, ರಾಜ್ಯ ಸರ್ಕಾರ ಕಸ ವಿಲೇವಾರಿಗೆ ಅಂತಾನೆ ಹೊಸ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ. "ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ" ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಅಸ್ತು ಎಂದಿದೆ. ಇನ್ನು ಮುಂದೆ ಕಂಪನಿಯಿಂದ ಕಸ ಸಂಗ್ರಹಣೆ, ಸಾಗಾಣಿಕೆ, ಹಾಗೂ ವಿಲೇವಾರಿ ಕಾರ್ಯ ಮಾಡಲಾಗುತ್ತದೆ. ಜೂನ್ ೧ ರಿಂದ ಮನೆ-ಮನೆಗೆ ತೆರಳಿ ಅಟೋದಲ್ಲಿ ಕಸ ಸಂಗ್ರಹಣೆ ಮಾಡೋದು, ಸಂಗ್ರಹಣೆ ಮಾಡಿದ ಕಸವನ್ನು ಟಿಪ್ಪರ್ ಲಾರಿಗಳ ಮೂಲಕ ಕಸದ ಸಂಸ್ಕರಣಾ ಘಟಕ ಅಥವಾ ಕ್ಯಾರಿಗಳಿಗೆ ಸಾಗಾಣಿಕೆ ಮಾಡೋದು ಇದರ ಕೆಲಸವಾಗಿರುತ್ತದೆ. ಈ ಸಂಸ್ಥೆಯು ಬಿಬಿಎಂಪಿ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಅಟೋ, ಟಿಪ್ಪರ್, ಕಾಂಪ್ಯಾಕ್ಟರ್, ಚಾಲಕರು ಸಹಾಯಕರು "ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ" ವ್ಯಾಪ್ತಿಗೆ ಬರಲಿದೆ. ಇನ್ನು ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರೋ ಅಧಿಕಾರಿಗಳು, ವಾರ್ಡ ಮಟ್ಟದ ಇಂಜಿನಿಯರ್ ಗಳು, ಸಿಬ್ಬಂದಿಗಯವರು ಸಹ "ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ" ದ ಅಧೀನದಲ್ಲಿ ಬರಲಿದ್ದಾರೆ. ಇವರ ವೇತನವನ್ನು ಈ ಸಂಸ್ಥೆಯೆ ಪಾವತಿ ಮಾಡಲಿದೆ. ಇತ್ತ ರಾಜ್ಯ ಸರ್ಕಾರ, ಬಿಬಿಎಂಪಿಗೆ ಪ್ರತಿ ವರ್ಷ ಸಂಸ್ಥೆಗೆ ಅಂತ ಅನುದಾನ ನೀಡಲಿದೆ. ಬಿಬಿಎಂಪಿ ಅಧೀನದಲ್ಲಿನ ಪೌರಕಾರ್ಮೀಕರು ಕೇವಲ ಕಸ ಗುಡಿಸೋದು. ಸಾರ್ವಜನಿಕ ಸ್ಥಳಗಳನ್ನು ಕ್ಲಿನ್ ಮಾಡುವುದ ಇವರ ಕೆಲಸ. ಇನ್ನು ಘನತ್ಯಾಜ್ಯ ಇಲಾಖೆಯನ್ನು ಅರೋಗ್ಯ ಇಲಾಖೆ ಜೊತೆ ವಿಲೀನ ಮಾಡಲಾಗುವುದು. ಬಿಬಿಎಂಪಿ ಮಾರ್ಷಲ್ ಗಳು ಕಂಪನಿ ಅಧೀನಕ್ಕೆ ಪಡೆದು ಇನ್ನೂ ಮುಂದೆ ಅರೋಗ್ಯ ಮತ್ತು ನೈರ್ಮಲ್ಯ ಶಾಖೆ ಅಂತ ಮಾರ್ಪಡುವಂತೆ ಆದೇಶ ಹೊರಡಿಸಲಾಗಿದೆ.
Post a comment
Log in to write reviews