ದೆಹಲಿ: ಸಂಸದೀಯ ಸಭೆಯಲ್ಲಿ ಎನ್‌ಡಿಎ ಸಂಸದರು ಇಂದು 18ನೇ ಲೋಕಸಭಾ ನಾಯಕನನ್ನಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿದ್ದಾರೆ.ಬಳಿಕ ಮಾತನಾಡಿದ ನರೇಂದ್ರ ಮೋದಿ ಇದು ಎಲ್ಲಕ್ಕಿಂತ ಯಶಸ್ವಿ ಮೈತ್ರಿಕೂಟವಾಗಿದೆ. ಇಂದಿನ ದಿನವನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮೆಲ್ಲರ ವಿಶ್ವಾಸ ನನ್ನನ್ನು ಭಾವುಕ ಆಗುವಂತೆ ಮಾಡಿದೆ ಅಂತ ಹೇಳಿದ್ದಾರೆ.. ಮುಂದಿನ ಐದು ವರ್ಷ ದೇಶದ ಜನರ ಆಕಾಂಕ್ಷೆಯನ್ನು ಪೂರೈಸಲು NDA ಸರ್ಕಾರ ಸಿದ್ಧವಾಗಿದೆ.. ಈ ಹಿಂದೆ ಎನ್‌ಡಿಎ 10 ವರ್ಷಗಳ ಕಾಲ ಉತ್ತಮ ಆಡಳಿತವನ್ನ ದೇಶದ ಜನರಿಗೆ ನೀಡಿದೆ.. ಸರ್ಕಾರ ಮತ್ತು ಜನರ ಮಧ್ಯೆ ದೊಡ್ಡ ಕಂದಕವಿತ್ತು ಆದ್ರೆ ಮುಂದೆ ಈ ರೀತಿಯ ಕಂದಕ ಇರೋದಕ್ಕೆ ಸಾಧ್ಯವಿಲ್ಲ ಅಂತ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ..
ದಕ್ಷಿಣದಲ್ಲಿ ಎನ್‌ಡಿಎ ಸಾಧನೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ದಕ್ಷಿಣ ಭಾರತದಲ್ಲಿ NDA ತನ್ನ ಅಡಿಪಾಯವನ್ನು ಭದ್ರಗೊಳಿಸಿದೆ.. ತಮಿಳುನಾಡು,ಕೇರಳದಲ್ಲಿ ನಾವು ಗಳಿಸಿರುವ ಮತ ಪ್ರಮಾಣ ಹೆಚ್ಚಾಗಿವೆ.ಪವನ್ ಕಲ್ಯಾಣ್ ಆಂಧ್ರಪ್ರದೇಶದ ಬಿರುಗಾಳಿ ಅಂತ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಪ್ರತಿ ವರ್ಷ ಫಲಿತಾಂಶದ ಸಂದರ್ಭದಲ್ಲಿ ಇವಿಎಂ ಬಗ್ಗೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮೋದಿ ಟಾಂಗ್ ನೀಡಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ನವರು EVM ದೂಷಿಸಲು ಸರ್ವ ಸನ್ನದ್ಧವಾಗಿ ಕೂತಿದ್ದರು.. EVM ಬದುಕಿದ್ಯಾ ಸತ್ತಿದ್ಯಾ..? ಅಂತ ಪ್ರಶ್ನೆ ಮಾಡಿದರು.. ಇದರ ಜೊತೆಗೆ ಮುಂದಿನ 5 ವರ್ಷಗಳ ಕಾಲ ಇವಿಎಂ ಭದ್ರವಾಗಿರಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಚುನಾವಣೆಗೂ ಮುನ್ನ ಸಂವಿಧಾನವನ್ನು ಅಸ್ತ್ರ ಮಾಡಿಕೊಂಡಿದ್ದ ವಿಪಕ್ಷಗಳಿಗೆ ಮಾತಿನಲ್ಲೇ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರಪಂಚದ ಎದುರು ನಮ್ಮ ಪ್ರಜಾಪ್ರಭುತ್ವನ್ನು ಅವಮಾನಿಸುವ ಯತ್ನ ಮಾಡುತ್ತಿದೆ ಅಂತ ತಿಳಿಸಿದ್ದಾರೆ..
ಹಿಂದೆಂದಿಗಿಂತಲೂ ಕಾಂಗ್ರೆಸ್ ವೇಗವಾಗಿ ಪಾತಾಳಕ್ಕೆ ಕುಸಿಯಲಿದೆ
ನಾವು ಸೋತವರನ್ನು ಯಾವತ್ತೂ ಅಪಹಾಸ್ಯ ಮಾಡೋದಿಲ್ಲ.. 2024ಕ್ಕಿಂತಲೂ ಹಿಂದೆ ಎನ್‌ಡಿಎ ಇತ್ತು ಈಗಲೂ ಇದೆ ಹಾಗೂ ಮುಂದೆಯೂ ಇರುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಕಾಂಗ್ರೆಸ್ ಪಡೆದುಕೊಂಡ ಸ್ಥಾನದ ಬಗ್ಗೆ ಲೇವಡಿ ಮಾಡಿದ ಮೋದಿ, ಇನ್ನೂ 10 ವರ್ಷ ಕಳೆದ್ರೂ ಕಾಂಗ್ರೆಸ್ ಸಂಖ್ಯೆ 100 ದಾಟುವುದಿಲ್ಲ.. ಹಿಂದೆಂದಿಗಿಂತಲೂ ಕಾಂಗ್ರೆಸ್ ವೇಗವಾಗಿ ಪಾತಾಳಕ್ಕೆ ಕುಸಿಯಲಿದೆ.. ಇವರು ತಮ್ಮದೇ ಪಕ್ಷದ ಪ್ರಧಾನಿಯನ್ನು ಅವಮಾನಿಸುವ ಜನ ಅಂತ ಕಿಡಿಕಾರಿದ್ದಾರೆ.
ಎನ್‌ಡಿಎ ಅಂದರೆ ನವ ಭಾರತ, ಅಭಿವೃದ್ಧಿ ಭಾರತ, ಆಕಾಂಕ್ಷೆ ಹೊಂದಿರುವ ಭಾರತ.. ನಾವು ಸೋತರೂ ಗೆದ್ದರೂ ನಮ್ಮ ನಡವಳಿಕೆ ಒಂದೇ ಆಗಿರುತ್ತೆ.. ಮೊದಲೇ ಹೇಳಿದ್ದಂತೆ 10 ವರ್ಷ ಮಾಡಿರೋದು ಟ್ರೈಲರ್ ಮಾತ್ರ.. ಎನ್‌ಡಿಎ ಯಾವಾಗಲೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ.. ಈ ಬಾರಿಯ ಚುನಾವಣೆಯಲ್ಲಿ ನಾವು ಅಭಿವೃದ್ಧಿ ಮಂತ್ರದಿಂದ ಮತ ಕೇಳಿದ್ದೇವೆ.. ದೇಶದ ಜನರಿಗೆ ಕಾಂಗ್ರೆಸ್ ಸುಳ್ಳಿ ಹೇಳಿದೆ.ಬಡವರಿಗೆ 1ಲಕ್ಷ ಕೊಡುವ ವಾಗ್ದಾನ ಕೊಟ್ಟಿತ್ತು.ಅದನ್ನು ಕೊಡಿ ಅಂತ ಜನ ಕೇಳುತ್ತಿದ್ದಾರೆ.ಇದು ಬಡವರಿಗೆ ಮಾಡಿದ ಮೋಸ ಅಲ್ಲವೇ ಅಂತ ನರೇಂದ್ರ ಮೋದಿ ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದ್ದಾರೆ.
ಮಹಿಳಾ ಮೀಸಲಾತಿಯಿಂದ ಈಗ ಮಹಿಳೆಯರು, ಸಹೋದರಿಯರು ಆಡಳಿತ ನಡೆಸುತ್ತಿದ್ದಾರೆ.. ಅತಿ ಹೆಚ್ಚು ಮಹಿಳೆಯರಿಗೆ ಟಿಕೆಟ್ ಕೊಟ್ಟ ಪಕ್ಷ ಅಂದ್ರೆ ಅದು ನಮ್ಮ ಎನ್‌ಡಿಎ ಪಕ್ಷ.10 ವರ್ಷದಲ್ಲಿ ಮೂಲ ಸೌಕರ್ಯದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಭಾರತ ಆರ್ಥಿಕತೆಯಲ್ಲಿ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಹೋಗಬೇಕಿದೆ.ಇದು ನಮ್ಮ ಅಭಿವೃದ್ಧಿಯ ಹಾದಿ ಅಂತ ನರೇಂದ್ರ ಮೋದಿ ತಿಳಿಸಿದ್ದಾರೆ.
Post a comment
Log in to write reviews