Samayanews.

Samayanews.

2024-12-24 12:10:08

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮಾಜಿ ಕ್ರಿಕೆಟಿಗನ ವಿರುದ್ಧ ಕೋಟ್ಯಾಂತರ ಅವ್ಯವಹಾರ ಆರೋಪ: ED ಅಧಿಕಾರಿಗಳ ದಾಳಿ

ಟೀಂ ಇಂಡಿಯಾದ ಮಾಜಿ ನಾಯಕ, ಕಾಂಗ್ರೆಸ್​ ಲೀಡರ್ ಮೊಹಮ್ಮದ್ ಅಜರುದ್ದೀನ್​​ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅಧಿಕಾರಿಗಳು ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಇ.ಡಿ ಕಚೇರಿಗೆ ವಿಚಾರಣೆಗೆ ಹಾಜರಾಗಲು ಹೋಗಿದ್ದರು.

ಈ ಹಿಂದೆ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​(HCA) ಅಧ್ಯಕ್ಷರಾಗಿದ್ದರು. ಈ ವೇಳೆ ಉಪ್ಪಲ್ ಕ್ರೀಡಾಂಗಣಕ್ಕಾಗಿ (Uppal Stadium) ಕ್ರಿಕೆಟ್ ಬಾಲ್ಸ್​, ಜಿಮ್ ಉಪಕರಣಗಳು, ಅಗ್ನಿಶಾಮಕ ಕಿಟ್‌ಗಳು ಮತ್ತು ಇತರೆ ಸಲಕರಣೆಗಳ ಖರೀದಿ ಮಾಡಲಾಗಿತ್ತು. 2020-23ರ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ಉಪ್ಪಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಇನ್ನು ತಮ್ಮ ಮೇಲಿನ ಆರೋಪ ನಿರಾಧಾರ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಅಜರುದ್ದೀನ್ ಹೇಳಿದ್ದಾರೆ.

img
Author

Post a comment

No Reviews