ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ನಾಯಕರಿಗೆ ಖಡಕ್ ಎಚ್ಚರಿಕೆಯೊಂದನ್ನ ಕೊಟ್ಟಿದ್ದಾರೆ. ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಆರು ತಿಂಗಳೊಳಗೆ ದೇಶದ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮತದಾರರಿಗೆ ನೀವು ಹಾಕುವ ಒಂದು ಮತದಿಂದ ದೇಶದ ಭವಿಷ್ಯ ನಿರ್ಧಾರವಾಗಲಿದೆ. ಜೂನ್ 4ರ ಫಲಿತಾಂಶವನ್ನು ಅನುಸರಿಸಿ ಮುಂದಿನ 6 ತಿಂಗಳಲ್ಲಿ, ವಂಶಪಾರಂಪರ್ಯ ರಾಜಕೀಯದ ಮೂಲಕ ಬೆಳೆದುಬಂದ ಪಕ್ಷಗಳು ಒಡೆದು ಚೂರುಚೂರಾಗಲಿವೆ ಎಂದಿದ್ದಾರೆ. ಈವರೆಗಿನ ಚುನಾವಣೆಗಳಲ್ಲಿ ನಿರಂತರವಾಗಿ ಕಾಂಗ್ರೆಸ್ ವಿಫಲವಾಗಿದೆ. ಇನ್ನು ವೈಫಲ್ಯವನ್ನು ಪ್ರದರ್ಶಿಸಿದ ನಾಯಕರ ಬಗ್ಗೆ ಕಾರ್ಯಕರ್ತರು ಅಸಮಾಧಾನಗೊಂಡಿರುವುದರಿಂದ ಕೌಟುಂಬಿಕ ರಾಜಕೀಯ ಪಕ್ಷಗಳು ಇತಿಹಾಸ ಪುಟಕ್ಕೆ ಸೇರಲಿವೆ ಎಂದಿದ್ದಾರೆ.
ಮುಂದಿನ 6 ತಿಂಗಳಲ್ಲಿ, ದೇಶ ಅಭಿವೃದ್ಧಿಯ ಹೊಸ ವೇಗಕ್ಕೆ ಕಾಣಲಿದೆ. ಎಲ್ಲ ಕುಟುಂಬ ಪಕ್ಷಗಳ ನಾಯಕರ ಬಗ್ಗೆ ಅವರದೇ ಕಾರ್ಯಕರ್ತರ ಮನಸ್ಸಿನಲ್ಲಿ ತೀವ್ರ ಅತೃಪ್ತಿ ಮೂಡಿದೆ. ನಿರಂತರವಾಗಿ ವಿಫಲರಾಗುತ್ತಿರುವ ನಾಯಕರು ಈಗಲೂ ನಾಯಕತ್ವದಲ್ಲಿ ಮುಂದುವರಿಯುತ್ತಿರುವವರನ್ನ ಅವರ ಕಾರ್ಯಕರ್ತರೇ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಕುಟುಂಬ ಪಕ್ಷಗಳು ತಮ್ಮಿಂದ ತಾವೇ ಒಡೆದು ಹೋಗುವುದು ಶತಃಸಿದ್ಧ ಎಂದು ಮೋದಿ ಹೇಳಿದ್ದಾರೆ.
Post a comment
Log in to write reviews