ಸೂಪರ್ 8ರ ಘಟ್ಟವನ್ನು ಖಚಿತಪಡಿಸಿಕೊಂಡಿರುವ ಭಾರತ ತಂಡ ಟಿ20 ವಿಶ್ವಕಪ್‌ನ ತನ್ನ ನಾಲ್ಕನೇ ಹಾಗೂ ಗುಂಪಿನ ಅಂತಿಮ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಆದರೆ ಫ್ಲಾರಿಡಾದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಸತತ ಮೂರು ಪಂದ್ಯಗಳಲ್ಲಿ ವಿಜಯದ ಪತಾಕೆ ಹಾರಿಸಿರುವ ಟೀಮ್ ಇಂಡಿಯಾ, 'ಎ' ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ 8ರ ಘಟ್ಟಕ್ಕೆ ತಲುಪಿದೆ. ಈ ಹಂತವು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಜರುಗಲಿದೆ.
ಕಳೆದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 150ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ್ದ ಕೊಹ್ಲಿ ವಿಶ್ವಕಪ್‌ನ ಆಕರ್ಷಣೆಯಾಗಿದ್ದರು. ಆದರೆ ಇದುವರೆಗೂ ಅಂತಹ ಪ್ರದರ್ಶನ ಅವರಿಂದ ಹೊರಬಂದಿಲ್ಲ. ಇವರು ಆಡಿದ 3ಪಂದ್ಯಗಳಲ್ಲಿ ಕ್ರಮಾವಾಗಿ 1,4,0 ರನ್‌ಗಳು ಅವರ ಬ್ಯಾಟ್‌ನಿಂದ ಬಂದಿದೆ. ಇನ್ನೂ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡಿಲ್ಲ.13 ವರ್ಷಗಳ ಬಳಿಗ ಐಸಿಸಿ ಟ್ರೋಫಿ ಎತ್ತುವ ತವಕದಲ್ಲಿರುವ ಟೀಮ್ ಇಂಡಿಯಾಗೆ ಟ್ರೋಫಿ ಗೆಲ್ಲಿಸಿ ಕೊಡಲು ಕೊಹ್ಲಿಗಿದು ಇದು ಕೊನೆಯ ಅವಕಾಶ. ಸೂಪರ್ 8ರ ಘಟ್ಟಕ್ಕೂ ಮುನ್ನ ಕ್ರಿಕೆಟ್ ಶಿಶು ಕೆನಡಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯ ವಿರಾಟ ರೋಪನ್ನ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ಗೆ ತಂಡದಲ್ಲಿ ಸ್ಥಾನ ಕಲ್ಪಿಸುವ ಸಾದ್ಯತೆ ಇದೆ. ಒಂದು ವೇಳೆ ಯಶಸ್ವಿಗೆ ಆಡುವ ಹನ್ನೋಂದರ ಬಳಗದಲ್ಲಿ ಸ್ಥಾನ ಸಿಕ್ಕರೆ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ರಿಷಭ್ ಪಂತ್ ಮತ್ತು ಸೂರ್ಯ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಟಾರೆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬಲಿಷ್ಟವಾಗಿದೆ.
ಇನ್ನು ಕೆನಡಾ ಆಡಿದ 3 ಪಂದ್ಯಗಳಲ್ಲಿ 2 ಸೋಲು ಮತ್ತು 1 ಗೆಲುವು ಪಡೆದು ಕೊಂಡು ಟೂರ್ನಿಯಿಂದ ಹೊರಬಿದ್ದಿದೆ. ಗುಂಪಿನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಟೀಮ್ ಇಂಡಿಯಾ ವಿರುದ್ಧ ದಿಟ್ಟ ಪ್ರದರ್ಶನ ನೀಡಲು ಉತ್ಸುಕತೆಯಿಂದ ಕಾಯತ್ತಿದೆ.
Post a comment
Log in to write reviews