ಭಾರತ
ಕೊನೆಗೂ ಆರು ತಿಂಗಳ ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಿಕ್ತು ಜಾಮೀನು
ನವದೆಹಲಿ: ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರವರು ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದು, ಇಂದು ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು.
ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಾಮೂರ್ತಿ ಸೂರ್ಯ ಕಾಂತ್‌ರವರು ಕೇಜ್ರಿವಾಲ್‌ಗೆ 10 ಲಕ್ಷ ರೂ ಬಾಂಡ್, ಎರಡು ಶ್ಯೂರಿಟಿಗಳೊಂದಿಗೆ ದ್ವಿಸದಸ್ಯ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.
ದೆಹಲಿ ಮದ್ಯ ನೀತಿ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಕೇಜ್ರಿವಾಲ್, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯಪೀಠ, ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಈಗಾಗಲೇ ಜಾಮೀನು ಸಿಕ್ಕಿರುವುದರಿಂದ ಕೇಜ್ರಿವಾಲ್ ಅವರನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳುವುದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ಅಭಿಪ್ರಾಯಟ್ಟಿತು.
22 ತಿಂಗಳುಗಳ ಕಾಲ ಅವರನ್ನು ಸಿಬಿಐ ಬಂಧಿಸಲಿಲ್ಲ. ಹಾಗೇ ಕೇಜ್ರಿವಾಲ್ ಬಂಧನ ನ್ಯಾಯಸಮ್ಮತವಲ್ಲ. ಆದರೆ, ಇಡಿ ಪ್ರಕರಣದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಸಿಬಿಐ ಬಂಧಿಸಿದ ತುರ್ತು ಕ್ರಮ ಅರ್ಥವಾಗುತ್ತಿಲ್ಲ ಎಂದು ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ನಲ್ಲಿದ್ದ ಆಪ್ ನಾಯಕರಾದ ಮನಿಶ್ ಸಿಸೋಡಿಯಾ ಮತ್ತು ಅತಿಶಿ ಅವರು ಜಾಮೀನು ಸಿಗುತ್ತಿದ್ದಂತೆ ಪರಸ್ಪರವಾಗಿ ಸಂಭ್ರಮಿಸಿದರು.
ಕೇಜ್ರಿವಾಲ್‌ರನ್ನು ಮೊದಲು ಮಾರ್ಚ್ನಲ್ಲಿ ಇಡಿ ಬಂಧಿಸಿತ್ತು. ಎರಡು ತಿಂಗಳ ಹಿಂದೆ ಇಡಿ ಪ್ರಕರಣದಲ್ಲಿ ಕೋರ್ಟ್ ಜಾಮೀನು ನೀಡಿತ್ತು. ಆದರೆ ಜುಲೈ 12ರಂದು ಸಿಬಿಐ ಬಂಧಿಸಿದ್ದರಿಂದ ಕೇಜ್ರಿವಾಲ್‌ಗೆ ಜೈಲು ವಾಸ ಮುಂದುವರಿದಿತ್ತು. ಇದೀಗ ಆರು ತಿಂಗಳ ಬಳಿಕ ದೆಹಲಿ ಸಿಎಂ ಬಿಡುಗಡೆಯಾಗುತ್ತಿದ್ದಾರೆ.
Post a comment
Log in to write reviews