ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ನಲ್ಲಿ 2023-24ರ ಸಾಲಿನ ಆರ್ಥಿಕ ಸಮೀಕ್ಷೆ ವರದಿ ಪ್ರಸ್ತುತಪಡಿಸಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಲೋಕಸಭೆಯಲ್ಲಿ, ಮತ್ತು 2 ಗಂಟೆಗೆ ರಾಜ್ಯಸಭೆಯಲ್ಲಿ ಈ ವರದಿಯನ್ನು ಮಂಡನೆ ಮಾಡಲಿದ್ದಾರೆ. ಜುಲೈ 23 ಕ್ಕೆ ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಬಜೆಟ್ ಮಂಡನೆಗೆ ಒಂದು ದಿನ ಆರ್ಥಿಕ ಸಮೀಕ್ಷೆ ವರದಿಯನ್ನು ಪ್ರಸ್ತುತಪಡಿಸಲಾಗುತ್ತದೆ. ಇದು ಬಜೆಟ್ನ ಪೂರ್ವಭಾವಿ ಆರ್ಥಿಕ ಅವಲೋಕನದ ದಾಖಲೆಯಾಗಿರುತ್ತದೆ. ದೇಶದ ಒಟ್ಟಾರೆ ಆರ್ಥಿಕ ಚಿತ್ರಣ ಹೇಗಿದೆ ಎಂಬುದನ್ನು ಈ ಸಮೀಕ್ಷೆ ಸುಳಿವು ನೀಡುತ್ತದೆ.
20024-24ರಲ್ಲಿ ಜಿಡಿಪಿ ದರ ಶೇ. 6.5 ರಿಂದ 7:ಸಮೀಕ್ಷೆ ಅಂದಾಜು
ಸಿಇಒ ವಿ ಅನಂತ ನಾಗೇಶ್ವರನ್ ನೇತೃತ್ವದಲ್ಲಿ ತಯಾರಾಗಿರುವ ಆರ್ಥಿಕ ಸಮೀಕ್ಷೆಯು 2024-25ರ ಭಾರತದ ಜಿಡಿಪಿ ಶೇ. 6.5ರಿಂದ 7ರಷ್ಟು ವೃದ್ಧಿಸಬಹುದು ಎಂದು ಅಂದಾಜಿಸಿದೆ. ಜಾಗತಿಕ ರಾಜಕೀಯ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಉತ್ತಮವಾಗಿದೆ. ಕೋವಿಡ್ನಿಂದ ಬಿದ್ದಿದ್ದ ಆರ್ಥಿಕತೆ ಈಗ ಬಹಳಷ್ಟು ಚೇತರಿಸಿಕೊಂಡಿದೆ. ಹಣಕಾಸು ಸ್ಥಿರತೆ ಸ್ಥಾಪನೆಯಾಗಿದೆ ಎಂದು ಹೇಳಿರುವ ಈ ಸಮೀಕ್ಷೆಯು, ಸದ್ಯ ಎದುರಾಗಿರುವ ಸವಾಲುಗಳ ಬಗ್ಗೆ ಗಮನ ಕೊಟ್ಟಿದೆ ಎಂದು ತಿಳಿದು ಬಂದಿದೆ.
ವ್ಯಾಪಾರ, ಹೂಡಿಕೆ, ಹವಾಮಾನ ಮೊದಲಾದ ಪ್ರಮುಖ ಜಾಗತಿಕ ಸಮಸ್ಯೆಗಳ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಮತಕ್ಕೆ ಬರಲು ಬಹಳ ಕಷ್ಟಕರವಾಗಿದೆ. ಹೀಗಾಗಿ, ಆಂತರಿಕವಾಗಿ ಆರ್ಥಿಕ ಬೆಳವಣಿಗೆಗೆ ಪೂರಕವಾದ ಅಂಶಗಳತ್ತ ಹೆಚ್ಚು ಗಮನ ಕೊಡಬೇಕಾಗುತ್ತದೆ ಎಂಬ ಸಂಗತಿಯನ್ನು ಆರ್ಥಿಕ ಸಮೀಕ್ಷೆ ಎತ್ತಿತೋರಿಸಿದೆ.
Post a comment
Log in to write reviews