Samayanews.

Samayanews.

2024-11-14 11:05:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿ ಯಶಸ್ವಿಯಾದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು

ಬೆಂಗಳೂರು : ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ವೇದಿಕೆ ಸಿದ್ದವಾಗಿದ್ದು, ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಇಂದು (ಸೆಪ್ಟೆಂಬರ್‌ 1)ಚಾಲನೆ ನೀಡಿ ಸಂಚಾರ ಯಶಸ್ವಿಯಾಗಿದೆ. ವರ್ಷಾಂತ್ಯಕ್ಕೆ ಮೊದಲ ರೈಲು ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸ್ಲೀಪರ್ ಕೋಚ್ ರೈಲಿನ ಮೂಲ ಮಾದರಿಯ ಮೊದಲ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನಾವರಣಗೊಳಿಸಿದ್ದು, ಪ್ರಾಯೋಗಿಕ ಸಂಚಾರಕ್ಕೂ ಚಾಲನೆ ನೀಡಿದರು. ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಸಾಥ್​ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಕನ್ನಡಿಗರಿಗೆ ಇಂದು ಐತಿಹಾಸಿಕ ದಿನವಾಗಿದ್ದು, ನಮ್ಮ ಮಣ್ಣಿನಲ್ಲಿ ಭಾರತದ ಇತಿಹಾಸವನ್ನು ಕನ್ನಡಿಗರ ಸ್ವಾಭಿಮಾನದಲ್ಲಿ ಭಾನುವಾರ ಬಿಇಎಂಎಲ್ ಹೊಸ ಮೈಲಿಗಲ್ಲು ಸ್ಥಾಪಿಸುವ ಮೂಲಕ ವಂದೇ ಭಾರತ್ ಸ್ಲೀಪರ್ ರೈಲು ಕೋಚ್ ಸಿದ್ಧಪಡಿಸಿದೆ.

ಹವಾ ನಿಯಂತ್ರಿತವಾಗಿರುವ ಈ ರೈಲು ರಾತ್ರಿ ವೇಳೆ ಸಂಚಾರಕ್ಕೆ ಉಪಯುಕ್ತವಾಗಿದ್ದು, ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಇಂದು ಕೇಂದ್ರ ರೈಲ್ವೆ ಸಚಿವರು ಸಮಗ್ರ ಪರಿಶೀಲನೆ ನಡೆಸಿದ್ದಾರೆ. ಸುಮಾರು 10 ದಿನಗಳ ಕಾಲ ಪರೀಕ್ಷಾರ್ಥ ಚಾಲನೆಯನ್ನು ನಡೆಸಲಿದೆ. ನಂತರ ಟ್ರ್ಯಾಕ್‌ನಲ್ಲಿ ಸಹ ಪರೀಕ್ಷೆ ನಡೆಸಲಾಗುತ್ತದೆ. ಇನ್ನು ಮೂರು ತಿಂಗಳಿನಲ್ಲಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಇದರ ಸಂಪೂರ್ಣ ಕ್ರೆಡಿಟ್ ಕಾರ್ಖಾನೆಯ ನೌಕರರಿಗೆ ಮತ್ತು ಆಡಳಿತ ಮಂಡಳಿ ಮತ್ತು ಪ್ರಧಾನಿ ಮೋದಿಗೆ ಸಲ್ಲಲಿದೆ ಎಂದರು.

ರೈಲಿನ ವಿಶೇಷತೆಗಳು : ಸ್ವದೇಶಿ ತಂತ್ರಜ್ಞಾನದೊಂದಿಗೆ ಪರಿಸರ ಸ್ನೇಹಿಯಾಗಿ ಬೆಂಗಳೂರಿನ ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌) ಹಾಗೂ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌)ಗಳಲ್ಲಿ ವಂದೇ ಭಾರತ್‌ ರೈಲಿನ ಸ್ಲೀಪರ್‌ ಕೋಚ್‌ಗಳನ್ನು ತಯಾರಿಸಲಾಗಿದೆ. ವಿಶಾಲವಾದ ಸ್ಥಳಾವಾಕಾಶ ಹೊಂದಿರಲಿರುವ ಸ್ಲೀಪರ್‌ ಕೋಚ್‌ಗಳಲ್ಲಿ ಆರಾಮದಾಯಕ ಸೀಟ್‌ಗಳು ಇರಲಿದ್ದು, ಸುಸಜ್ಜಿತ ಹಾಗೂ ವಿಶಾಲ ಶೌಚಾಲಯಗಳು, ಉತ್ತಮ ಬೆಳಕಿನ ವ್ಯವಸ್ಥೆ ಹೊಂದಿರಲಿವೆ.

ಮೊಬೈಲ್‌ ಹೋಲ್ಡರ್‌, ಚಾರ್ಜ್ ಪಾಯಿಂಟ್‌, ಸ್ನ್ಯಾಕ್ಸ್ ಟೇಬಲ್‌ ಹೊಂದಿರುವ ಕೋಚ್​ಗಳು ಅಪಘಾತ ನಿಯಂತ್ರಕ 'ಕವಚ' ವ್ಯವಸ್ಥೆಯೊಂದಿಗೆ ಉಕ್ಕಿನಿಂದ ನಿರ್ಮಿಸಲಾಗಿದೆ. ಜಿಎಫ್‌ಆರ್‌ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ, ಪೂರ್ಣ ಪ್ರಮಾಣದ ಸ್ವಯಂ ಚಾಲಿತ ಡೋರ್‌ ಇರಲಿದ್ದು, ಗಂಟೆಗೆ 160 ಕಿ. ಮೀ ವೇಗದಲ್ಲಿ ರೈಲು ಚಲಿಸಲಿದೆ.

ಕೋಚ್​ಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಬೋಗಿಯ ಒಳಗೆ ಅಳವಡಿಸಿರುವ ಬಟನ್ ಒತ್ತಿ ಲೋಕೋ ಪೈಲೆಟ್ ನಮ್ಮ ಮೆಟ್ರೋದಲ್ಲಿ ಇರುವಂತೆ ಡಿಸ್ಪ್ಲೇ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಜನರಿಗೆ ರೈಲು ಎಲ್ಲಿದೆ?. ಯಾವ ನಿಲ್ದಾಣದಲ್ಲಿದೆ. ನಮ್ಮ ನಿಲ್ದಾಣ ಯಾವಾಗ ಬರಲಿದೆ? ಎನ್ನುವುದು ಗೊತ್ತಾಗಲಿದೆ. ತುಂಬಾ ಕಂಫರ್ಟೆಬಲ್ ಆಗಿರುವ ಸೀಟುಗಳ ವ್ಯವಸ್ಥೆ ಮಾಡಲಾಗಿದೆ.

ವಂದೇ ಭಾರತ್ ಸ್ಲೀಪರ್ 16 ಕೋಚ್‌ಗಳನ್ನು ಹೊಂದಿರಲಿದೆ. 4 ಎಸಿ 2 ಟೈಯರ್ ಕೋಚ್‌ (188 ಬರ್ತ್‌), 11 ಎಸಿ 3 ಟೈಯರ್ ಕೋಚ್‌ (611 ಬರ್ತ್‌), ಮತ್ತು 1 ಎಸಿ ಫಸ್ಟ್ ಕ್ಲಾಸ್ ಕೋಚ್ (24 ಬರ್ತ್‌) ಒಳಗೊಂಡಿದೆ. ಒಟ್ಟು 823 ಸೀಟುಗಳ ವ್ಯವಸ್ಥೆ ಇರಲಿದೆ. ಫಸ್ಟ್ ಕ್ಲಾಸ್ ಎಸಿ ಬರ್ತ್​ನಲ್ಲಿ ಬಿಸಿ ನೀರಿನ ಶವರ್ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿದೆ.

 

img
Author

Post a comment

No Reviews