ಪುಟ್ಬಾಲ್ ತಂಡದ ದೈತ್ಯ ಆಟಗಾರ ಭಾರತ ಪುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅಂತರಾಷ್ಟ್ರೀಯ ಪುಟ್ಬಾಲ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.
ಅವರು ಇದೀಗ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ. ಜೂನ್ 06ರಂದು ಕುವೈತ್ ವಿರುದ್ದ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವು ಚೆಟ್ರಿ ಭಾರತ ಪರ ಆಡಲಿರುವ ಕೊನೆಯ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ ಎನಿಸಲಿದೆ. 39 ವಷ೯ದ ಸುನೀಲ್ ಚೆಟ್ರಿಯ ಈ ದಿಡೀರ್ ನಿರ್ಧಾರ ಅವರ ಅಭಿಮಾನಿ ವಲಯದಲ್ಲಿ ಬೇಸರವನ್ನು ಮೂಡಿಸಿದೆ.
Post a comment
Log in to write reviews