ಚಿಕ್ಕೋಡಿ: ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನು ಜೂನ್ 16 ರಿಂದ 30ರವರೆಗೆ ಉಚಿತವಾಗಿ ಕನೇರಿ ಸಿದ್ಧಗಿರಿ ಆಸ್ಪತ್ರೆಯಲ್ಲಿ ಮಾಡಲಾಗುವುದು ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕೊಲ್ಲಾಪುರ ಕನೇರಿ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ಅನೂಕೂಲವಾಗಲು ಕೊಲ್ಲಾಪುರ ಕನೇರಿ ಸಿದ್ಧಗಿರಿ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಅಂಜಿಯೋಗ್ರಫಿ, ಆಂಜಿಯೋಪ್ಲ್ಯಾಸ್ಟಿ, ಬೈಪಾಸ್ ಸರ್ಜರಿ ಮಾಡಿಕೊಡಲಾಗುತ್ತದೆ ಎಂದರು.
ಹಲವರು ಹೃದಯ ರೋಗದಿಂದ ಬಳಲುತ್ತಿದ್ದಾರೆ. ಹೃದ್ರೋಗಿಗಳಿಗೆ ಅಂಜಿಯೋಗ್ರಫಿ ಜೊತೆಗೆ ಅತ್ಯಾಧುನಿಕ ಹೃದಯ ಚಿಕಿತ್ಸೆ ಉಚಿತವಾಗಿ ನಡೆಯಲಿದೆ. ಇದರಿಂದ ಪ್ರತಿ ವರ್ಷ ಸಾಕಷ್ಟು ರೋಗಿಗಳಿಗೆ ಅನುಕೂಲವಾಗಿದೆ. ಇಂದು ಹೃದಯ ರೋಗಿಗಳಿಗೆ ಸುಧಾರಿತ ಚಿಕಿತ್ಸೆ ನೀಡುವುದು ಒಂದು ಸಂಕೀರ್ಣ ವಿಷಯವಾಗಿದೆ ಎಂದರು.
ಹೃದಯ ರೋಗ ತಜ್ಞ ಡಾ. ಗಣೇಶ ಇಂಗಳೆ ಮಾತನಾಡಿ, ಸಿದ್ಧಗಿರಿ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಕರೋನರಿ ಆಂಜಿಯೋಪ್ಲಾಸ್ತ್ರಿ, ಪೆರಿಫೆರಲ್ ಇಂಟರ್ವೆನ್ಸನ್ ರೀನಲ್ ಅಂಜಿಯೋಗ್ರಫಿ, ಅಂಜಿಯೋಪ್ಲಾಸ್ತ್ರಿ, ಪರ್ಮನೆಂಟ್ ಪೇಸ್ ಮೇಕರ್ ಆಳವಡಿಸಿ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ ಎಎಸ್‌ಡಿ, ಪಿಡಿಐ, ವಿಎಸ್‌ಡಿ, ಚಿಕಿತ್ಸೆ ಮತ್ತು ಹೃದಯ ಚಿಕಿತ್ಸೆ ಸಹ ಮಾಡಲಾಗುತ್ತದೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ. ಪ್ರಕಾಶ ಭರಮಗೌಡರ ಉಸ್ಥಿತರಿದ್ದರು.
Post a comment
Log in to write reviews