Samayanews.

Samayanews.

2024-11-14 10:45:25

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಫ್ರೆಂಚ್​ ಸರ್ಕಾರ ಟೆಲಿಗ್ರಾಮ್ ಸಿಇಒ ಡುರೊವ್​ಗೆ ತ್ವರಿತ ಪೌರತ್ವ ನೀಡಲು ನಿರ್ಧಾರ

ಬೆಲ್‌ಗ್ರೇಡ್, ಸರ್ಬಿಯಾ: ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ ಸಿಇಒ ಪಾವೆಲ್ ಡುರೊವ್ ಅವರಿಗೆ ತ್ವರಿತ ಹಾಗೂ ವಿಶೇಷ ಪೌರತ್ವ ನೀಡುವ ನಿರ್ಧಾರವನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸಮರ್ಥಿಸಿಕೊಂಡಿದ್ದಾರೆ. ಅಪರಾಧ ಚಟುವಟಿಕೆಯ ಆರೋಪದಲ್ಲಿ ಫ್ರಾನ್ಸ್​ನಲ್ಲಿ ಬಂಧಿತರಾಗಿ ಬಿಡುಗಡೆಗೊಂಡಿದ್ದು, ತನಿಖೆ ಎದುರಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ಅವರು ಸದ್ಯಕ್ಕೆ ಫ್ರಾನ್ಸ್​ ತೊರೆಯುವಂತಿಲ್ಲ. ಹೀಗಾಗಿ ಅವರಿಗೆ ಫ್ರೆಂಚ್​ ಸರ್ಕಾರ ತ್ವರಿತ ಪೌರತ್ವ ನೀಡಲು ನಿರ್ಧರಿಸಿದೆ.

ಡುರೊವ್ ತಮ್ಮ ಅನಿರೀಕ್ಷಿತ ವಾರಾಂತ್ಯದ ಬಂಧನದ ಮೊದಲು ಫ್ರಾನ್ಸ್‌ಗೆ ಬರುತ್ತಿದ್ದಾರೆ ಎಂಬುದು ತಮಗೆ ತಿಳಿದಿರಲಿಲ್ಲ ಮತ್ತು ಅವರನ್ನು ಭೇಟಿ ಮಾಡುವ ಯಾವುದೇ ಯೋಜನೆ ಇರಲಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್​ ಮ್ಯಾಕ್ರನ್ ಗುರುವಾರ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಡುರೊವ್‌ ಅವರನ್ನು 5 ಮಿಲಿಯನ್ ಯುರೋಗಳ ಸ್ಯೂರಿಟಿ ಪಡೆದು ಜಾಮೀನಿನ ಮೇಲೆ ಫ್ರಾನ್ಸ್​​ನ ಕೋರ್ಟ್​ ಬಿಡುಗಡೆ ಮಾಡಿದೆ. ಅವರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದ್ದು, ವಿಚಾರಣೆ ಅಥವಾ ಪ್ರಕರಣ ಮುಗಿಯುವವರೆಗೂ ಫ್ರಾನ್ಸ್‌ನಿಂದ ಹೊರಹೋಗುವುದನ್ನು ಕೋರ್ಟ್​ ನಿರ್ಬಂಧಿಸಿದೆ. ಮುಂದಿನ ತನಿಖೆಗಾಗಿ ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗುವಂತೆಯೂ ಸೂಚನೆ ನೀಡಲಾಗಿದೆ. ಹೀಗಾಗಿ ಅವರು ಫ್ರಾನ್ಸ್​ನಲ್ಲೇ ಉಳಿಯಬೇಕಾಗಿದೆ.

ಟೆಲಿಗ್ರಾಮ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಲೈಂಗಿಕ ಚಿತ್ರಗಳನ್ನು ಹಂಚಿಕೊಳ್ಳಲು ಮತ್ತು ಅಪ್ಲಿಕೇಶನ್‌ನಲ್ಲಿನ ಕಾನೂನುಬಾಹಿರ ಚಟುವಟಿಕೆಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಟೆಲಿಗ್ರಾಂ ಮುಖ್ಯಸ್ಥರನ್ನು ಪ್ರೆಂಚ್​ ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದರು. ಅಷ್ಟೇ ಅಲ್ಲ ಡುರೊವ್​ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿರುವ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ತನಗೆ ಸಂಬಂಧಿಸದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಹುದು ಎಂದು ಯೋಚಿಸುವುದು ಸಂಪೂರ್ಣವಾಗಿ ಅಸಂಬದ್ಧವಾಗಿದೆ ಎಂದು ಡುರೊವ್ ಅವರ ವಕೀಲರಾದ ಡೇವಿಡ್ - ಒಲಿವಿಯರ್ ಕಾಮಿನ್ಸ್ಕಿ ಫ್ರೆಂಚ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣವು ಆನ್‌ಲೈನ್‌ನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುವ ಮತ್ತು ಇಂತಹ ಪ್ರಕರಣಗಳನ್ನು ಭೇದಿಸುವಲ್ಲಿ ಪೋಲೀಸರಿಗೆ ದೊಡ್ಡ ಸವಾಲನ್ನು ತಂದೊಡ್ಡಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್​​ ಮ್ಯಾಕ್ರನ್, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಉದ್ಯಮಿಗಳ ಸ್ವಾತಂತ್ರ್ಯವನ್ನು ಫ್ರಾನ್ಸ್ ಬೆಂಬಲಿಸುತ್ತದೆ. ಫ್ರಾನ್ಸ್‌ನ ಸಂಪತ್ತಿಗೆ ಕೊಡುಗೆ ನೀಡುವ ಮತ್ತು ಫ್ರೆಂಚ್ ಕಲಿಯುವ ಉನ್ನತ ಮಟ್ಟದ ಕ್ರೀಡಾ ತಾರೆಗಳು, ಪ್ರದರ್ಶಕರು ಮತ್ತು ಇತರರಂತೆ, ಫ್ರೆಂಚ್ ರಾಷ್ಟ್ರೀಯತೆಗಾಗಿ ಡುರೊವ್ ಅವರ ವಿನಂತಿಯನ್ನು ಅನುಮೋದಿಸುವುದು 'ನಮ್ಮ ದೇಶಕ್ಕೆ ಒಳ್ಳೆಯದು' ಎಂದು ಅವರು ಹೇಳಿದ್ದಾರೆ. ಸರ್ಬಿಯಾ ಪ್ರವಾಸದಲ್ಲಿರುವಾಗ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮ್ಯಾಕ್ರನ್​ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

img
Author

Post a comment

No Reviews