ಮೊದಲಿನಂತೆ ಹೋಗಿ ಬರುವಲ್ಲೆಲ್ಲ ಚಿಲ್ಲರೆ ಕಾಸು ಕೊಂಡೊಯ್ಯಬೇಕಿಲ್ಲ. ಇದೀಗ ಇಡೀ ವಿಶ್ವವೇ ಡಿಜಿಟಲೀಕರಣಗೊಂಡಿದೆ. ನೀರು, ಕರೆಂಟ್ ಹೀಗೆ ಎಲ್ಲ ಪಾವತಿ ವ್ಯವಸ್ಥೆಗಳು ಸಂಪೂರ್ಣ ಡಿಜಿಟಲ್ ಯುಪಿಐ ಮೂಲಕ ಸುಲಭವಾಗಿ ಪಾವತಿ ವ್ಯವಸ್ಥೆ ಇದೀಗ ಜನರ ಜೀವನ ಸುಲಭಗೊಳಿಸಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಗೂಗಲ್ ಪೇ ಸರ್ವೀಸ್ ಸಮಯವನ್ನು ಉಳಿಸುವ ವರದಾನ ಎನಿಸಿಕೊಂಡಿದೆ.
ಜಿ ಪೇ ಮೂಲಕ ಯುಪಿಐ ಪಾವತಿ, ರೀಚಾರ್ಜ್ ಸೇರಿದಂತೆ ಹಲವು ಸೇವೆಗಳನ್ನು ನಾವು ಪಡೆಯಬಹುದು. ಆದರೆ ಜೂನ್ 4 ರಿಂದ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುತ್ತಿದೆ. ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಅಪ್ಡೇಟೆಡ್ ಮಾದರಿಯಲ್ಲಿ ಗೂಗಲ್ ಪೇ ಬರಲಿದ್ದು ಅಲ್ಲಿಯವರೆಗೆ ಗೂಗಲ್ ವಾಲೆಟ್ ಬಳಸಲು ಕೋರಿಕೊಳ್ಳಲಾಗಿದೆ.
ಮಂಗಳವಾರದಿಂದ ಅಮೆರಿಕ ಸೇರಿದಂತೆ ಕೆಲ ದೇಶದಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುತ್ತಿದೆ. ಕೆಲ ದಿನಗಳಲ್ಲಿ ಹೊಸ ರೀತಿಯಲ್ಲಿ ಬರಲಿದೆ. ಆದರೆ ಬಳಕೆದಾರರು ಹೆಚ್ಚಾಗಿರುವ ಭಾರತ, ಸಿಂಗಾಪುರ ಸೇರಿದಂತೆ ಇತರ ಕೆಲ ದೇಶದಲ್ಲಿ ಗೂಗಲ್ ಪೇ ಸೇವೆ ಈಗ ಹೇಗಿದೆಯೋ ಹಾಗೆ ಮುಂದುವರಿಯಲಿದೆ. ಈ ದೇಶಗಳಲ್ಲಿ ಗೂಗಲ್ ಪೇ ಸ್ಟಾಂಡ್ಲೋನ್ ಆ್ಯಪ್ ಆಗಿ ಮುಂದುವರಿಯಲಿದೆ. ಗ್ರಾಹಕರು ಚಿಂತೆ ಇಲ್ಲದೆ ಎಂದಿನಂತೇ ಗೂಗಲ್ ಪೇ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.
Post a comment
Log in to write reviews