Samayanews.

Samayanews.

2024-12-24 12:21:15

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಇನ್ಮುಂದೆ 8 ವರ್ಷ ಮೀರಿದ್ರೆ 1ನೇ ತರಗತಿ ಪ್ರವೇಶವಿಲ್ಲ ಗರಿಷ್ಠ ವಯೋಮಿತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ.

ಬೆಂಗಳೂರು : ಎಲ್ ಕೆಜಿ, ಯುಕೆಜಿ ಮತ್ತು 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ಗೊಂದಲಕ್ಕೆ ಶಿಕ್ಷಣ ಇಲಾಖೆ ಅಧಿಕೃತ ತೆರೆ ಎಳೆದಿದೆ. ಇನ್ಮುಂದೆ 8 ವರ್ಷ ಮೀರಿದರೆ 1 ನೇ ಕ್ಲಾಸಿಗೆ ಪ್ರವೇಶವಿಲ್ಲ.
ಎಲ್ ಕೆಜಿ, ಯುಕೆಜಿ ಹಾಗೂ 1ನೇ ತರಗತಿ ಮಕ್ಕಳ ಪ್ರವೇಶಕ್ಕೆ ವಯೋಮಿತಿ ನಿಗದಿ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎಲ್ ಕೆಜಿ ಪ್ರವೇಶಕ್ಕೆ ಗರಿಷ್ಠ ವಯೋಮಿತಿ 4 ವರ್ಷ, ಯುಕೆಜಿ ಪ್ರವೇಶಕ್ಕೆ 5ರಿಂದ 7 ವರ್ಷ ನಿಗದಿ ಮಾಡಲಾಗಿದೆ.

ಹಾಗೆಯೇ 1ನೇ ತರಗತಿ ಪ್ರವೇಶಕ್ಕೆ ಗರಿಷ್ಠ ವಯೋಮಿತಿ 6-8 ವರ್ಷ ನಿಗದಿ ಪಡಿಸಲಾಗಿದೆ. ಹೀಗಾಗಿ ಇನ್ಮುಂದೆ 8 ವರ್ಷ ಮೀರಿದ್ರೆ 1ನೇ ತರಗತಿ ಪ್ರವೇಶವಿರುವುದಿಲ್ಲ. 8 ವರ್ಷ ಮೀರಿದರೂ ಶಾಲೆಗೆ ಸೇರದ ಮಕ್ಕಳನ್ನು ಶಾಲೆ ಬಿಟ್ಟ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಅಂತಹ ಮಕ್ಕಳನ್ನು ಅವರ ವಯಸ್ಸಿಗೆ ತಕ್ಕಂತೆ ತರಗತಿಗಳ ಪ್ರವೇಶ ನೀಡಲಾಗುತ್ತದೆ. ಈ ಮೂಲಕ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಇದ್ದ ವಯೋಮಿತಿ ಗೊಂದಲ ನಿವಾರಣೆಯಾಗಿದೆ. ಈ‌ ನಿಯಮ 2025 -26 ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗಲಿದೆ.

img
Author

Post a comment

No Reviews