ನೈಜೀರಿಯಾದಲ್ಲಿ ಇಂಧನ ಟ್ಯಾಂಕರ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಕನಿಷ್ಠ 48 ಮಂದಿ ಮೃತಪಟ್ಟ ಘಟನೆ ನೈಜೀರಿಯಾದ ಉತ್ತರ- ಮಧ್ಯ ನೈಜರ್ ರಾಜ್ಯದ ಅಗೈ ಪ್ರದೇಶದಲ್ಲಿ ನಡೆದಿದೆ.
ಇಂಧನ ಟ್ಯಾಂಕರ್ ಮತ್ತೊಂದು ಟ್ರಕ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಟ್ಯಾಂಕರ್ ಸ್ಫೋಟವಾಗಿದೆ. ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ
ಅಪಘಾತಕ್ಕಿಡಾದ ಟ್ರಕ್ ನಲ್ಲಿ ದನಗಳನ್ನು ಸಾಗಿಸಲಾಗುತ್ತಿದ್ದು, ಇದರಲ್ಲಿ 50 ದನಗಳು ಜೀವಂತ ದಹನವಾಗಿವೆ. ಅಪಘಾತದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತುರ್ತಾಗಿ ನಡೆಸಲಾಗಿದೆ ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಏಜೆನ್ಸಿಯ ಮಹಾನಿರ್ದೇಶಕ ಅಬ್ದುಲ್ಲಾಹಿ ಬಾಬಾ-ಅರಬ್ ಹೇಳಿದ್ದಾರೆ.
ಬಾಬಾ- ಅರಬ್ ಆರಂಭದಲ್ಲಿ 30 ಶವಗಳು ಪತ್ತೆಯಾಗಿತ್ತು. ಬಳಿಕ ಘರ್ಷಣೆಯಲ್ಲಿ ಸುಟ್ಟು ಕರಕಲಾದ ಹೆಚ್ಚುವರಿ 18 ಶವಗಳು ಕಂಡುಬಂದಿವೆ. ಮೃತರ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿದೆ.
ನೈಜರ್ ರಾಜ್ಯದ ಗವರ್ನರ್ ಮೊಹಮ್ಮದ್ ಬಾಗೊ, ಪೀಡಿತ ಪ್ರದೇಶದ ನಿವಾಸಿಗಳು ಶಾಂತವಾಗಿರಬೇಕು ಮತ್ತು ರಸ್ತೆ ಬಳಕೆದಾರರು ಯಾವಾಗಲೂ ಜಾಗರೂಕರಾಗಿರಿ. ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ರಸ್ತೆ ಸಂಚಾರ ನಿಯಮಗಳಿಗೆ ಬದ್ಧರಾಗಿರಿ ಎಂದು ಹೇಳಿದ್ದಾರೆ.
ಸರಕುಗಳನ್ನು ಸಾಗಿಸಲು ರೈಲು ಸಾರಿಗೆ ಅವ್ಯವಸ್ಥೆ ಹಿನ್ನೆಲೆಯಲ್ಲಿ ಆಫ್ರಿಕಾದ ಅತ್ಯಂತ ಜನನಿಬಿಢ ದೇಶವಾದ ನೈಜೀರಿಯಾದ ಹೆಚ್ಚಿನ ಪ್ರಮುಖ ರಸ್ತೆಗಳಲ್ಲಿ ಮಾರಣಾಂತಿಕ ಟ್ರಕ್ ಅಪಘಾತಗಳು ಸಂಭವಿಸುತ್ತಿರುತ್ತದೆ. ಅಲ್ಲದೆ ಅಜಾಗರೂಕ ಚಾಲನೆ, ಕಳಪೆ ರಸ್ತೆ ಪರಿಸ್ಥಿತಿ, ಕಳಪೆ ನಿರ್ವಹಣೆಯ ವಾಹನಗಳು ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ತಜ್ಞರು
Post a comment
Log in to write reviews