ಗುಜರಾತ್: ಗುಜರಾತ್ ಮೂಲದ ಗಣೇಶ್ ಬಾರಯ್ಯ ವಿಶ್ವದಲ್ಲೇ ಅತ್ಯಂತ ಕುಳ್ಳಗಿನ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡಾ.ಗಣೇಶ್ ಅವರು ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಇದೀಗ ವೈದ್ಯರಾಗಿ ತನ್ನ ಸೇವೆಯನ್ನು ಪ್ರಾರಂಭಿಸಿದ್ದಾರೆ. 2018ರಲ್ಲಿ NEET ನಲ್ಲಿ 233 ಅಂಕಗಳನ್ನು ಗಳಿಸಿದ್ದರೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿಯು ಕುಳ್ಳಗಿರುವುದರಿಂದ ಗಣೇಶ್ ಅವರನ್ನು ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ತಿರಸ್ಕರಿಸಿತ್ತು. ಎತ್ತರ ಕಡಿಮೆ ಇರುವ ಕಾರಣ ತುರ್ತು ಚಿಕಿತ್ಸೆ ಸಮಯದಲ್ಲಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಬಳಿಕ ತನ್ನ ಕಾಲೇಜಿನ ಪ್ರಾಂಶುಪಾಲರ ಸಹಾಯ ಪಡೆದು ಜಿಲ್ಲಾಧಿಕಾರಿ, ರಾಜ್ಯ ಶಿಕ್ಷಣ ಸಚಿವರನ್ನು ಸಂಪರ್ಕಿಸಿ ನಂತರ ಗುಜರಾತ್ ಹೈಕೋರ್ಟ್ ವರೆಗೂ ಹೋಗಿದ್ದಾರೆ. ಹೈಕೋರ್ಟ್‌ನಲ್ಲಿ ಕೇಸ್ ಸೋತ ನಂತರವೂ ಡಾ.ಬಾರಯ್ಯ ಭರವಸೆ ಕಳೆದುಕೊಳ್ಳಲಿಲ್ಲ. ಅವರು ಸುಪ್ರೀಂ ಕೋರ್ಟ್ ಸಂಪರ್ಕಿಸಿ 2018 ರಲ್ಲಿ ಪ್ರಕರಣವನ್ನು ಗೆದ್ದು, 2019 ರಲ್ಲಿ 3 ಅಡಿ 4 ಇಂಚು ಎತ್ತರದ ಡಾ. ಗಣೇಶ್ MBBS ಗೆ ಪ್ರವೇಶ ಪಡೆದು ,MBBS ಮುಗಿಸಿ ಕೇವಲ ಅವರ ದೃಢಸಂಕಲ್ಪ ಮತ್ತು ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಇದೀಗಾ ವೈದ್ಯರಾಗಿ ತನ್ನ ಸೇವೆಯನ್ನು ಪ್ರಾರಂಭಿಸಿದ್ದಾರೆ ಭಾವನಗರದ Sir-T ಆಸ್ಪತ್ರೆಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದಾರೆ.
Post a comment
Log in to write reviews