ಕಸದಿಂದ ವಿದ್ಯುತ್ ಉತ್ಪಾದಿಸುವ ಹಲವು ದಶಕಗಳ ಬಿಬಿಎಂಪಿ ಕನಸು ಕೊನೆಗೂ ನನಸಾಗುವ ಕಾಲ ಸನ್ನಿಹಿತವಾಗಿದೆ. ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್)ದ ವತಿಯಿಂದ ಬಿಡದಿ ಸ್ಥಾವರದಲ್ಲಿ ಜೂನ್ ತಿಂಗಳಿಂದ ಪರೀಕ್ಷಾರ್ಥ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ.
ಸಿಲಿಕಾನ್ ಸಿಟಿಯಲ್ಲಿ ನಿತ್ಯ 5 ಸಾವಿರ ಟನ್‌ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಸಂಗ್ರಹ, ವಿಲೇವಾರಿ ಹಾಗೂ ಸಂಸ್ಕರಣೆಗೆ ವಾರ್ಷಿಕ ಸುಮಾರು 900 ಕೋಟಿ ರೂ.ಗಿಂತ ಹೆಚ್ಚು ವ್ಯಯಿಸಲಾಗುತ್ತಿದೆ. ಆದರೂ, ತ್ಯಾಜ್ಯ ಸಮಸ್ಯೆ ಸರಿದಾರಿಗೆ ಬರುತ್ತಿಲ್ಲ. ವಿದ್ಯುತ್ ಉತ್ಪಾದನೆಯಿಂದ ಈ ಸಮಸ್ಯೆಗೆ ಸ್ವಲ್ಪ ಮುಕ್ತಿ ಸಿಗುವ ನಿರೀಕ್ಷೆ ಇದೆ. ಕಸದಿಂದ ವಿದ್ಯುತ್ ತಯಾರಿಸಲು ಆಸಕ್ತಿ ತೋರಿರುವ ಕೆಲ ಕಂಪೆನಿಗಳು ಪಾಲಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಒಪ್ಪಂದ ಮಾಡಿಕೊಂಡು ವರ್ಷಗಳೇ ಉರುಳಿದರೂ ಯಾವ ಕಂಪೆನಿಯೂ ವಿದ್ಯುತ್ ಉತ್ಪಾದನೆ ಶುರು ಮಾಡಿಲ್ಲ. ಆದರೆ, ಸರಕಾರಿ ಸ್ವಾಮ್ಯದ ಕೆಪಿಸಿಎಲ್ ವಿದ್ಯುತ್ ಉತ್ಪಾದನಾ ಕಾರ್ಯಕ್ಕೆ ನಾಂದಿ ಹಾಡಿದೆ.
Tags:
- India News
- Kannada News
- large scale industrial waste heat-to-power/cogeneration
- generation
- stream generation
- garbage collection
- global alliance for incinerator alternatives
- anti incineration
- united nations development programme
- waste management (organization sector)
- clean energy transition
- waste-to-energy
- garbage
- electricity generation (field of study)
- incineration plants
- ethiopian electric power
- conservation of resources
- demonstration
- testimony on waste to energy
Post a comment
Log in to write reviews