ನವದೆಹಲಿ: ರಿಲಯನ್ಸ್ ನ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿರುವ ಅದಾನಿ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ಮತ್ತೊಮ್ಮೆಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಭಾರತೀಯರಾಗಿದ್ದಾರೆ.
ಬ್ಲೂಮ್ಬರ್ಗ್ ಬಿಡುಗಡೆ ಮಾಡಿರುವ ಏಷ್ಯಾದ ಶ್ರೀಮಂತರ ಪಟ್ಟಿಯ ವರದಿಯಲ್ಲಿ ಗೌತಮ್ ಅದಾನಿ ಮೊದಲ ಸ್ಥಾನಕ್ಕೇರಿದ್ದಾರೆ. ಮುಕೇಶ್ ಅಂಬಾನಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದಾನಿ ಒಟ್ಟು ಮೌಲ್ಯ ಒಟ್ಟು 111 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವಾಗಿದೆ. ಅಂಬಾನಿ ಒಟ್ಟು ಆಸ್ತಿ 109 ಬಿಲಿಯನ್ ಅಮೇರಿಕನ್ ಡಾಲರ್ ಎಂದು ಬ್ಲೂಮ್ಬರ್ಗ್ ಇಂಡೆಕ್ಸ್ ವರದಿ ಹೇಳಿದೆ.
2023ರಲ್ಲಿ ಅದಾನಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹಿಂಡನ್ಬರ್ಗ್ ವರದಿಯಿಂದ ಅದಾನಿ ಉದ್ಯಮಕ್ಕೆ ಭಾರಿ ಹಿನ್ನಡೆಯಾಗಿತ್ತು. 2023ರಲ್ಲಿ ಸುಪ್ರೀಂ ಕೋರ್ಟ್ ಹಿಂಡನ್ಬರ್ಗ್ ವರದಿ ಕುರಿತು ತನಿಖೆಗೆ ಆದೇಶಿಸಿತ್ತು. ಹಿಂಡನ್ಬರ್ಗ್ ವರದಿಗೂ ಮುನ್ನ ಅದಾನಿ ವಿಶ್ವದ 3ನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ವರದಿ ಬಳಿಕ ಅದಾನಿ ಷೇರುಗಳು ಪಾತಾಳಕ್ಕೆ ಕುಸಿದಿತ್ತು. ಲಕ್ಷ ಕೋಟಿ ರೂಪಾಯಿಗಳ ನಷ್ಟ ಸಂಭವಿಸಿತ್ತು. ಹೀಗಾಗಿ ಶ್ರೀಮಂತರ ಪಟ್ಟಿಯಿಂದ ಅದಾನಿ ಹೊರಬಿದ್ದಿದ್ದರು.
ಅದಾನಿ ಷೇರುಪೇಟೆ ಹಾಗೂ ಉದ್ಯಮದಲ್ಲಿ ಮೋಸದ ಮಾರ್ಗದಲ್ಲಿ ಆದಾಯಗಳಿಸುತ್ತಿದೆ ಎಂದು ಅಮೇರಿಕದ ಹಿಂಡನ್ಬರ್ಗ್ ಸಂಸ್ಥೆ ಆರೋಪಿಸಿತ್ತು. ಈ ಬಗ್ಗೆ ಷೇರುಪೇಟೆ ನಿಯಂತ್ರಣ ಪ್ರಾಧಿಕಾರವಾದ ಸೆಬಿ ತನಿಖೆ ನಡೆಸಿತ್ತು.
Post a comment
Log in to write reviews