Samayanews.

Samayanews.

2024-12-24 12:05:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗೃಹಲಕ್ಷ್ಮೀ ದುಡ್ಡಿನಲ್ಲಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ ವೃದ್ಧೆ!

ಬೆಳಗಾವಿ  : ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಫಲಾನುಭಿಗಳು ಟಿವಿ, ಫ್ರೀಡ್ಜ್‌, ಮೊಬೈಲ್‌ ಸೇರಿದಂತೆ ಮತ್ತಿತರ ವಸ್ತುಗಳನ್ನು ಖರೀದಿ ಮಾಡಿ ಸುದ್ದಿಯಾಗಿರುವುದು ಎಲ್ಲರಿಗೂ ಗೊತ್ತು. ಆದರೆ, ಈ ಫಲಾನುಭವಿ ವೃದ್ಧೆ ಗೃಹಲಕ್ಷ್ಮೀ ಯೋಜನೆಯಿಂದ ತನಗೆ ಬಂದ 10 ತಿಂಗಳ ಹಣ ಕೂಡಿಸಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿ, ಗಮನ ಸೆಳೆದಿದ್ದಾರೆ.

ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಅಕ್ಕಾತಾಯಿ ಲಂಗೋಟಿ(Akka thayi langoti) ಊರಿಗೆ ಹೋಳಿಗೆ ಊಟ ಹಾಕಿಸಿದ ವೃದ್ಧೆ. ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪ್ರತಿ ತಿಂಗಳು ಕುಟುಂಬ ಯಜಮಾನಿಗೆ ₹2 ಸಾವಿರ ನೀಡುತ್ತಿದೆ. ರಾಜಕೀಯವಾಗಿ ಸಿದ್ದರಾಮಯ್ಯ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಸದುದ್ದೇಶದಿಂದ ಊರಿಗೆ ಹೋಳಿಗೆ ಊಟ ಹಾಕಿಸಿ, ಗ್ರಾಮದ ದೇವತೆಗೂ ಪೂಜೆ ಸಲ್ಲಿಸಲಾಗಿದೆ. ಅಲ್ಲದೆ, ಐವರು ಮುತ್ತೈದೆಯರಿಗೆ ಉಡಿ ತುಂಬಿ ಅಜ್ಜಿ ಹರಿಸಿದ್ದಾರೆ. ಈ ಅಜ್ಜಿಯ ಕಾರ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ತಾನೇ ಸ್ವತ ಅಜ್ಜಿಯೇ ಹೋಳಿಗೆ ಮಾಡಿ, ಗ್ರಾಮಸ್ಥರಿಗೆ ಊಟ ಉಣ ಬಡಿಸಿದ್ದಾರೆ. ಈ ಅಜ್ಜಿಗೆ ಗ್ರಾಮದ ಮಹಿಳೆಯರು ಕೂಡ ಸಾಥ್‌ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆ(Gruhalakshmi scheme)ಯಡಿ ರಾಜ್ಯದ ಬಡ ವರ್ಗದ ತುಂಬಾ ಅನುಕೂಲವಾಗಿದೆ.ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ರಾಜ್ಯಸರ್ಕಾರ ಸ್ಥಗಿತಗೊಳಿಸಬಾರದು ಎಂದು ಲಕ್ಕವ್ವ ಹಟ್ಟಿಹೊಳಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಗೃಹಲಕ್ಷ್ಮೀ ಯೋಜನೆಯಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿದ ಅಜ್ಜಿ ಅಕ್ಕಾತಾಯಿ ಲಂಗೋಟಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ(Lakshmi hebbalkar) ಅವರು ದೂರವಾಣಿ ಮೂಲಕ ಅಜ್ಜಿಯನ್ನು ಸಂಪರ್ಕಿಸಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಿಂದ ಇಡೀ ಊರಿಗೆ ಊಟ ಹಾಕಿರುವ ವಿಚಾರ ತಿಳಿದು ತುಂಬಾ ಖುಷಿಯಾಗಿದೆ. ನಿಮ್ಮಂತವರಿಗೆ ಈ ಯೋಜನೆ ಕೊಟ್ಟಿರುವುದು ಸ್ವಾರ್ಥಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಗೃಹಲಕ್ಷ್ಮೀ ಯೋಜನೆಯ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿದ ಹಿನ್ನೆಲೆಯಲ್ಲಿ ಅಜ್ಜಿಅಕ್ಕಾತಾಯಿ ಲಂಗೋಟಿ ಅವರಿಗೆ ಸಚಿವೆ ಹೆಬ್ಬಾಳಕರ ರೇಷ್ಮೆ ಸೀರೆ ಕಳುಹಿಸಿದ್ದಾರೆ. ಅವರ ಕಾರ್ಯಕ್ಕೆಮೆಚ್ಚಿ ಊರಿನಲ್ಲಿ ಅವರನ್ನು ಸನ್ಮಾನಿಸಿ,ಗೌರವಿಸಲಾಯಿತು.

ಸಿಎಂ ಸಿದ್ದರಾಮಯ್ಯ ಅವರು ಇಡೀ ರಾಜ್ಯಕ್ಕೆ ಅನ್ನಭಾಗ್ಯ, ಗೃಹಲಕ್ಷ್ಮೀಯೋಜನೆಗಳ ಮೂಲಕ ಅನ್ನ ಹಾಕಿದ್ದಾರೆ. ಹಾಗಾಗಿ,ಅವರಿಗೆ ಯಾವಾಗಲೂ ಒಳ್ಳೆಯದೇ ಆಗಬೇಕು. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹರಕೆ ಹೊತ್ತು ನನಗೆ ಬಂದ 10 ತಿಂಗಳ ಭಾಗ್ಯಲಕ್ಷ್ಮೀ ಹಣದಿಂದ ಗ್ರಾಮದ ಜನತೆಗೆ ಹೋಳಿಗೆ ಊಟ ಹಾಕಿಸಿದ್ದೇನೆ.

img
Author

Post a comment

No Reviews