ಮೇ 10 ರಂದು ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಐಪಿಲ್ ಪಂದ್ಯದಲ್ಲಿ ಗುಜರಾತ್ ಚೆನ್ನೈ ವಿರುದ್ದ ಭರ್ಜರಿ ಜಯ ಗಳಿಸಿತು. ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡರು. ಇತ್ತ ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಬ್ಯಾಟರ್ಸ್ ಮೈದಾನದಲ್ಲಿ ರನ್ಗಳ ಮಳೆಯನ್ನೇ ಸುರಿಸಿದರು. ಈ ಮೂಲಕ ಚೆನ್ನೈಗೆ 231 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ನಿಗದಿತ 20 ಒವರ್ ಗೆ 196 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದರ ಮೂಲಕ ಗುಜರಾತ್ ಟೈಟನ್ಸ್ ಚೆನ್ನೈ ವಿರುದ್ದ ೩೫ ರನ್ಗಳ ಅಂತರದಿಂದ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಸಾಯಿ ಸುದರ್ಶನ್ (103) ಹಾಗೂ ಶುಬ್ಮನ್ ಗಿಲ್ (104) ಇವರು ಗಳಿಸಿದ ಶತಕ ಗುಜರಾತ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿತು.
Post a comment
Log in to write reviews