ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿರುವ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಆಟಗಾರ ಗಸ್ ಅಟ್ಕಿನ್ಸನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಈ ಮೈದಾನದಲ್ಲಿ ಆಡಿದ 4 ಇನಿಂಗ್ಸ್ಗಳ ಮೂಲಕ ಎಂಬುದು ವಿಶೇಷ. ಇದರೊಂದಿಗೆ 1978 ರಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನು ಅಟ್ಕಿನ್ಸನ್ ಅಳಿಸಿ ಹಾಕಿದ್ದಾರೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಕೇವಲ 4 ಇನಿಂಗ್ಸ್ಗಳ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು ಇಂಗ್ಲೆಂಡ್ ಆಟಗಾರ ಗಸ್ ಅಟ್ಕಿನ್ಸನ್ (Gus Atkinson). ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಟ್ಕಿನ್ಸನ್ 115 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 118 ರನ್ ಚಚ್ಚಿದ್ದಾರೆ.
ಈ ಸ್ಪೋಟಕ ಸೆಂಚುರಿಯೊಂದಿಗೆ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸಿದ ಬ್ಯಾಟರ್ಗಳ ಹಾನರ್ಸ್ ಪಟ್ಟಿಯಲ್ಲಿ ಗಸ್ ಅಟ್ಕಿನ್ಸನ್ ಹೆಸರು ಕೂಡ ಸೇರ್ಪಡೆಯಾಯಿತು. ವಿಶೇಷ ಎಂದರೆ ಅತ್ತ ಇದೇ ಮೈದಾನದಲ್ಲಿ 5 ಹಾಗೂ 10 ವಿಕೆಟ್ಗಳ ಸಾಧನೆ ಮಾಡಿದ ಬೌಲರ್ಗಳ ಹಾನರ್ಸ್ ಪಟ್ಟಿಯಲ್ಲೂ ಅಟ್ಕಿನ್ಸನ್ ಹೆಸರಿಸಿದೆ.
ಇದರೊಂದಿಗೆ ಕ್ರಿಕೆಟ್ ಕಾಶಿಯಲ್ಲಿ ಅತೀ ಕಡಿಮೆ ಇನಿಂಗ್ಸ್ಗಳ ಮೂಲಕ ಮೂರು ಹಾನರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗಸ್ ಅಟ್ಕಿನ್ಸನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ನ ಮಾಜಿ ಆಟಗಾರ ಇಯಾನ್ ಬಾಥಮ್ ಹೆಸರಿನಲ್ಲಿತ್ತು.
1978 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಯಾನ್ ಬಾಥಮ್ ಶತಕ ಬಾರಿಸಿದ್ದರು. ಅಲ್ಲದೆ ಅದೇ ಪಂದ್ಯದಲ್ಲಿ 5 ವಿಕೆಟ್ಗಳ ಸಾಧನೆ ಮಾಡಿದ್ದರು. ಆದರೆ ಲಾರ್ಡ್ಸ್ ಮೈದಾನದಲ್ಲಿ 5 ವಿಕೆಟ್, 10 ವಿಕೆಟ್ (2 ಇನಿಂಗ್ಸ್ಗಳ ಮೂಲಕ) ಹಾಗೂ ಶತಕ ಸಿಡಿಸಿದ ಹಾನರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಇಯಾನ್ ಬಾಥಮ್ ಒಟ್ಟು 6 ಇನಿಂಗ್ಸ್ ತೆಗೆದುಕೊಂಡಿದ್ದರು.
ಆದರೀಗ ಈ ದಾಖಲೆಯನ್ನು ಗಸ್ ಅಟ್ಕಿನ್ಸನ್ ಮುರಿದಿದ್ದಾರೆ. ಅದು ಸಹ ಕೇವಲ 4 ಇನಿಂಗ್ಸ್ಗಳ ಮೂಲಕ ಎಂಬುದು ವಿಶೇಷ. ಜುಲೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಟ್ಕಿನ್ಸನ್ ಮೊದಲ ಇನಿಂಗ್ಸ್ನಲ್ಲಿ 7 ವಿಕೆಟ್ ಪಡೆದಿದ್ದರು. ಈ ಮೂಲಕ ಲಾರ್ಡ್ಸ್ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲೂ 5 ವಿಕೆಟ್ ಕಬಳಿಸಿ ಒಟ್ಟು 12 ವಿಕೆಟ್ ಪಡೆದಿದ್ದರು. ಈ ಮೂಲಕ ಲಾರ್ಡ್ಸ್ ಟೆಸ್ಟ್ನಲ್ಲಿ 10 ವಿಕೆಟ್ಗಳನ್ನು ಪಡೆದ ಸಾಧಕರ ಪಟ್ಟಿಗೂ ಸೇರ್ಪಡೆಯಾಗಿದ್ದರು.
ಇದೀಗ ಶ್ರೀಲಂಕಾ ವಿರುದ್ಧ ಶತಕ ಸಿಡಿಸುವ ಮೂಲಕ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ ಲಾರ್ಡ್ಸ್ ಸ್ಟೇಡಿಯಂನಲ್ಲಿನ ಮೂರು ಹಾನರ್ಸ್ ಪಟ್ಟಿಯಲ್ಲೂ ಸ್ಥಾನ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಕ್ರಿಕೆಟ್ ಕಾಶಿಯಲ್ಲಿ ಗಸ್ ಅಟ್ಕಿನ್ಸನ್ ಕೇವಲ 4 ಇನಿಂಗ್ಸ್ಗಳ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Post a comment
Log in to write reviews