ಪಿ ಎಮ್ ನಾಡಗೌಡರ ಕನಸಿನ ಕೂಸಾದ ಹುನಗುಂದ ಶಿಕ್ಷಕರ ತರಬೇತಿ ಕೇಂದ್ರದ ವ್ಯವಸ್ಥೆ ಬಹಳ ಹದಗೆಟ್ಟು ಹೋಗಿ ಈಗ ಟಪೋರಿಗಳ ಆಶ್ರಯತಾಣವಾಗಿದೆ, ಪ್ರಸ್ತುತ ಇಲ್ಲಿ ಟಪೋರಿಗಳು ದಂಧೆ ಮಾಡುವುದು ಎಣ್ಣೆ ಹೊಡಿಯುವುದನ್ನ ಮಾಡುತ್ತಿದ್ದಾರೆ. 1964 ರಲ್ಲಿ ಪಿ ಎಂ ನಾಡಗೌಡರು ಈ ಕಾಲೇಜನ್ನು ಹೈದರಾಬಾದ್ ಕರ್ನಾಟಕ ಹಾಗೂ ಬಾಂಬೆ ಕರ್ನಾಟಕದ ಮಧ್ಯಭಾಗವಾಗಿರುವ ಹುನಗುಂದ ನಗರದಲ್ಲಿ ಸ್ಥಾಪಿಸಿದರು. ಈ ಕೇಂದ್ರದಲ್ಲಿ ಕಲಿತವರು ಇಂದು ಹೆಸರಾಂತ ಸಾಹಿತಿಗಳು, ರಾಜಕಾರಣಿಗಳು, ಚಿಂತಕರು, ಚಲನಚಿತ್ರ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.
ಈ ಕಾಲೇಜಿನಿಂದ ಪ್ರತಿ ವರ್ಷ ಕನಿಷ್ಟ 30 ವಿದ್ಯಾರ್ಥಿಗಳು ಶಿಕ್ಷಕರಾಗಿ ಹೊರಹೊಗುತ್ತಿದ್ದರು. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಶಿಕ್ಷಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. 2008/2009 ರಲ್ಲಿ ಅಂದಿನ ಸಕಾ೯ರ ಖಾಸಗಿ ಶಾಲೆಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಹಾಜರಾತಿಯ ಕೊರತೆಯನ್ನು ಮುಂದಿಟ್ಟುಕೊಂಡು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ಸ್ಥಳಾಂತರಿಸಲಾಗಿದೆ.ಇಂತಹ ಪವಿತ್ರ ಜಾಗ ಇಂದು ಅಕ್ರಮ ದಂಧೆ ಮತ್ತು ಕುಡುಕರ ಗೂಡಾಗಿ ಪರಿವರ್ತನೆ ಯಾಗಿರುವುದು ಬೇಸರದ ಸಂಗತಿ.
ಈ ಕಟ್ಟಡ ತಾಲೂಕು ಆಡಳಿತ ಕಚೇರಿ ಪಕ್ಕದಲ್ಲಿದ್ದರು ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದದ ಸಂಗತಿ. ಕೂಡಲೇ ಈ ಕಟ್ಟಡವನ್ನು ಪುನರ್ ಜ್ಜೀವನ ಗೊಳಿಸಿ ಇಲ್ಲವೇ ಶಿಕ್ಷಣಕ್ಕಾಗಿಯೇ ಇಲ್ಲಿ ಹೊಸ ಕಟ್ಟಡ ನಿರ್ಮಿಸಿ ಎಂದು ನಮ್ಮ ಸಮಯ ಟಿವಿಯ ಆಗ್ರಹಿಸುತ್ತಿದೆ.
ಮಹಾಂತೇಶ್ ಹಳ್ಳೂರು: ತಾಲೂಕು ವರದಿಗಾರರು ಹುನುಗುಂದ ಬಾಗಲಕೋಟೆ ಜಿಲ್ಲೆ
Post a comment
Log in to write reviews