ಮೊಮ್ಮಗನಿಗೆ ರಕ್ಷಣೆ ನೀಡಲು ಕಾನೂನು ತಜ್ಙರೊಂದಿಗೆ ಸಮಲೋಚನೆ ನಡೆಸಿದ ಎಚ್ ಡಿ ದೇವೇಗೌಡ
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಅವರಿಗೆ ರಕ್ಷಣೆ ನೀಡಲು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.
ಆದರೆ ಮೂಲಗಳ ಪ್ರಕಾರ, ತಮ್ಮ ಮುಂದೆ ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೋರಿರುವ ಪ್ರಜ್ವಲ್ ಅವರ ಅರ್ಜಿಯನ್ನು ಎಸ್‌ಐಟಿ ತಿರಸ್ಕರಿಸುವ ಸಾಧ್ಯತೆಯಿದೆ. ಪ್ರಜ್ವಲ್ ದುಬೈಗೆ ತೆರಳಿದ್ದಾರೆ ಎಂದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಮತ್ತೊಂದು ನೋಟಿಸ್ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಆರೋಪಿಯು ಸಾಕ್ಷ್ಯವನ್ನು ನಾಶಪಡಿಸದಂತೆ ಖಚಿತಪಡಿಸಿಕೊಳ್ಳಲು ತನಿಖಾ ತಂಡವು ಅವರನ್ನು ಆದಷ್ಟು ಬೇಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಿದೆ
.ಈ ನಿಟ್ಟಿನಲ್ಲಿ ದೇವೇ ಗೌಡರು ಇಲ್ಲಿನ ತಮ್ಮ ನಿವಾಸದಲ್ಲಿ ರೇವಣ್ಣ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಾನೂನು ತಜ್ಞರನ್ನು ಭೇಟಿ ಮಾಡಿದ್ದಾರೆ. ಪ್ರಜ್ವಲ್ ಅವರ ಪೋಷಕರಾದ ಎಚ್‌ಡಿ ರೇವಣ್ಣ ಮತ್ತು ಭವಾನಿ ಕೂಡ ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಈಗ ದೇವೇಗೌಡರ ಕುಟುಂಬದ ಮೇಲೆ ಒತ್ತಡ ಹೆಚ್ಚಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.
Tags:
- prajwal revanna
- jd(s)
- deve gowda's family
- karnataka politics
- hd deve gowda
- congress
- bjp
- loksabha election 2024
- deve gowda
- hd deve gowda today news
- hd deve gowda prime minister
- deve gowda news
- deve gowda speech
- hd deve gowda speech
- deve gowda prime minister
- h d deve gowda
- hd deve gowda meets modi
- deve gowda speech in parliament
- h. d. deve gowda
- hd deve gowda newsprajwal revanna
Post a comment
Log in to write reviews