ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ರೇವಣ್ಣನಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ರೇವಣ್ಣ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜನ ಪ್ರತಿನಿಧಿಗಳ ಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗಿತ್ತು. ಇತ್ತ ರೇವಣ್ಣ ಪರ ಸಿ. ವಿ ನಾಗೇಶ್ ವಾದ ಮಂಡಿಸಿದರೆ ಎಸ್ ಐ ಟಿ ಪರ ಜಾಯ್ನಾ ಕೊಠಾರಿ ವಾದವನ್ನು ಮಂಡನೆ ಮಾಡಿದ್ದರು. ಸುಧಿರ್ಘ ವಾದ ಪ್ರತಿವಾದಗಳ ನಂತರ ನ್ಯಾಯ ಮೂರ್ತಿ ಸಂತೋಷ್ ಗಜಾನನ ಭಟ್ ಅವರು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದರು. ಅದರ ಪ್ರಕಾರ ಎಚ್ ಡಿ ರೇವಣ್ಣಅವರು ೫ ಲಕ್ಷ ಬಾಂಡ್ ನೀಡಬೇಕು ಸಾಕ್ಷಾಧಾರವನ್ನು ನಾಶ ಮಾಡಬಾರದು ಹಾಗೆಯೇ ಎಸ್ ಐ ಟಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ಬದ್ಧ ಜಾಮೀನು ನೀಡಿದೆ.
Post a comment
Log in to write reviews