ದೆಹಲಿ ಮೂಲದ ನಟಿ ಪಾಯಲ್ ರಜಪೂತ್ ಸೌತ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಚೆಲುವೆ ಕನ್ನಡ 'ಹೆಡ್‌ಬುಷ್' ಚಿತ್ರದಲ್ಲಿ ಮಿಂಚಿದ್ದರು. ಇದೀಗ ಚಿತ್ರವೊಂದರ ನಿರ್ಮಾಪಕರ ಬಗ್ಗೆ ಆಕೆ ಆರೋಪ ಮಾಡಿದ್ದಾರೆ. ಈ ಬಗೆ ಪಾಯಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ನಿರ್ಮಾಪಕರಿಂದ ತನಗೆ ಆಗುತ್ತಿರುವ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
2019-2020ರ ಸಮಯದಲ್ಲಿ ನಾನು 'ರಕ್ಷಣ' ಎಂಬ ಚಿತ್ರ ಒಪ್ಪಿಕೊಂಡೆ. ಮೊದಲು ಚಿತ್ರದ ಶೀರ್ಷಿಕೆ '5Ws' ಎಂದು ಇಡಲಾಗಿತ್ತು ಕಾರಣಾಂತರಗಳಿಂದ ಈ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಇತ್ತೀಚೆಗೆ ನನಗೆ ಸಿಕ್ಕ ಯಶಸ್ಸು ನೋಡಿ ಈ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಒಪ್ಪಂದದ ಪ್ರಕಾರ ನನಗೆ ನೀಡಬೇಕಾದ ಸಂಭಾವನೆಯನ್ನು ಇನ್ನು ಕೊಟ್ಟಿಲ್ಲ. ಅಲ್ಲದೆ ಚಿತ್ರದ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸುತ್ತಿದ್ದಾರೆ. ಎಂದು ಪಾಯಲ್ ಬರೆದುಕೊಂಡಿದ್ದಾರೆ.
ನಾನು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀನಿ. ಹಾಗಾಗಿ ನನ್ನ ತಂಡದವರು 'ರಕ್ಷಣ' ಚಿತ್ರತಂಡದ ಜೊತೆ ಮಾತನಾಡಿದ್ದಾರೆ. ಉಳಿದ ಸಂಭಾವನೆ ಕೊಡಬೇಕು ಎಂದು ಕೇಳಿದ್ದಾರೆ. ಅವರು ಅದಕ್ಕೆ ಒಪ್ಪಲು ಸಿದ್ಧರಿಲ್ಲ. ಒಂದು ವೇಳೆ ಚಿತ್ರದ ಪ್ರಚಾರಕ್ಕೆ ಬರದಿದ್ದರೆ ನನ್ನನ್ನು ತೆಲುಗು ಚಿತ್ರರಂಗದಿಂದಲೇ ಬ್ಯಾನ್ ಮಾಡುವುದಾಗಿ ಬೆದರಿಸುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ.
ಇತ್ತೀಚಿನ ಮೀಟಿಂಗ್‌ನಲ್ಲಿ ನನ್ನ ಬಗ್ಗೆ ಅಸಭ್ಯ ಭಾಷೆ ಬಳಸಲಾಗಿದೆ. ನನಗೆ ನೀಡಬೇಕಾದ ಸಂಪೂರ್ಣ ಸಂಭಾವನೆಯನ್ನು ನೀಡದೆ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದಕ್ಕಾಗಿ ನಾನು ಈಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ಆಕೆ ಪೋಸ್ಟ್ ಮಾಡಿದ್ದಾರೆ.
Post a comment
Log in to write reviews