ಕರ್ನಾಟಕದಲ್ಲಿ ಮೇ 18ರಿಂದ 20ರವರೆಗೆ ಭಾರೀ ಮಳೆ ಆಗುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಈ ಮೂರು ದಿನಗಳ ಕಾಲ ಕರ್ನಾಟಕದ ದಕ್ಷಿಣದಲ್ಲಿ 115.5-204.5 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದ್ದಲ್ಲದೆ, ಆರೆಂಜ್ ಅಲರ್ಟ್ ಅನ್ನೂ ಘೋಷಿಸಿದೆ.
ಜನರು ಆದಷ್ಟು ಸುರಕ್ಷಿತವಾಗಿರುವಂತೆಯೂ ತಿಳಿಸಿದೆ. ಅದೇ ರೀತಿ ನೆರೆಯ ರಾಜ್ಯ ತಮಿಳುನಾಡಿಗೆ ಭಾರೀ ಮಳೆಯ ರೆಡ್ ಅಲರ್ಟ್‌ಅನ್ನು ಸರ್ಕಾರ ನೀಡಿದೆ.
ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮೇ 16ರಂದು 204.5 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಮೇ 17ರಿಂದ 20ರ ಒಳಗೆ 115.5-204.5 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
2024 ರ ಮೇ 22ರವರೆಗೆ ದಕ್ಷಿಣ ಪೆನಿನ್ಸುಲಾರ್ ಭಾರತದಲ್ಲಿ ಮುಂದುವರಿಯುವ ಸಾಧ್ಯತೆಯಿರುವ ಆರ್ದ್ರ ವಾತಾವರಣವು ಭಾರೀ ಮಳೆಗೆ ಕಾರಣವಾಗಬಹುದು ಎಂದು ಅಂದಾಜಿಸಿದೆ. 6 ಮತ್ತು 20 ರಂದು ತಮಿಳುನಾಡಿನಲ್ಲಿ ಮತ್ತು ಮೇ 20 ರಂದು ಕೇರಳದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
Tags:
- India News
- Kannada News
- heavy rain in karnataka
- karnataka heavy rain
- heavy rain in karnataka'
- heavy rains in karnataka
- karnataka heavy rains
- heavy rains at karnataka
- heavy rain in karnataka rain
- heavy rain in hubli karnataka
- heavy rains lash karnataka
- rain in karnataka
- heavy rain forecast in karnataka
- rains in karnataka
- karnataka rain
- karnataka rains
- heavy rains in kerala and karnataka '
- heavy rains lash parts of karnataka
- heavy rain in uttara kannada
- karnataka rain news
Post a comment
Log in to write reviews