ಬೆಂಗಳೂರಿನ ಹೂಡಿ ಮೇಲ್ಸೇತುವೆ ಅಪಾಯದಲ್ಲಿದ್ದು, ಹೂಡಿ ರೈಲ್ವೇ ಫ್ಲೈಓವರ್‌ನಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸುವ ಸಾಧ್ಯತೆ ಇದೆ. ಬೆಂಗಳೂರಿನ ಹೂಡಿಯಲ್ಲಿ ರೈಲ್ವೇ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ದಶಕದಷ್ಟು ಹಳೆಯದಾದ ಮೇಲ್ಸೇತುವೆಯನ್ನು ತುರ್ತಾಗಿ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಫ್ಲೈಓವರ್ ನಾಲ್ಕು ಬೇರಿಂಗ್ಗಳು ವಿಫಲವಾಗಿದ್ದು, ವಾಹನ ಬಳಕೆದಾರರಿಗೆ ಅಪಾಯ ತಂದೊಡ್ಡಿದೆ.
ಮೇಲ್ಸೇತುವೆಯನ್ನು ತಕ್ಷಣ ದುರಸ್ತಿ ಮಾಡುವಂತೆ ನೈಋತ್ಯ ರೈಲ್ವೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮನವಿ ಮಾಡಿದೆ. ಅದರಂತೆ, ಇಂದು ಫ್ಲೈಓವರ್ ತಪಾಸಣೆ ನಡೆಯಲಿದೆ. ಬಳಿಕ ಘನ ವಾಹನಗಳನ್ನು ನಿಷೇಧಿಸುವ ಬಗ್ಗೆ ಸಂಚಾರ ಪೊಲೀಸರು ನಿರ್ಧರಿಸುವ ಸಾಧ್ಯತೆಯಿದೆ.
Post a comment
Log in to write reviews