Samayanews.

Samayanews.

2024-12-24 12:50:20

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಚಿತ್ರಾಲಂಕಾರದ ಬಳಿಕ ಬೆದರಿ ಓಡಿದ ಹಿರಣ್ಯ ಆನೆ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಆಗಮಿಸಿದ ಹಿರಣ್ಯ ಎಂಬ ಆನೆ ಚಿತ್ರಾಲಂಕಾರದ ಬಳಿಕ ಬೆದರಿ ಅಡ್ಡಾದಿಡ್ಡಿ ಓಡಾಡಿದೆ.

ಶ್ರೀರಂಗಪಟ್ಟಣಕ್ಕೆ ಮಹೇಂದ್ರ, ಲಕ್ಷ್ಮೀ, ಹಿರಣ್ಯ ಎಂಬ 3 ಆನೆಗಳು ಆಗಮಿಸಿವೆ. ಬನ್ನಿಮಂಟಪದಿಂದ ರಂಗನಾಥ ಮೈದಾನದವರೆಗೆ ಅಂಬಾರಿ ಜೊತೆ ಹಿರಣ್ಯ ಆನೆ ಹೆಜ್ಜೆ ಹಾಕಲಿದೆ. ಈ ಆನೆಗೆ ಕುಮ್ಕಿ ಆನೆಯಾಗಿ ಲಕ್ಷ್ಮೀ ಹಾಗೂ ಹಿರಣ್ಯ ಆನೆಗಳು ಹೆಜ್ಜೆ ಹಾಕಲಿದೆ. ಆನೆಗಳಿಗೆ ಚಿತ್ರಾಲಂಕಾರದ ಮಾಡಿದ ಬಳಿಕ ಹಿರಣ್ಯ ಎಂಬ ಆನೆ ಬೆದರಿ ಅಡ್ಡಾದಿಡ್ಡಿ ಓಡಾಡಿದೆ.

ಜನರು ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿದ್ದಾರೆ. ಈ ವೇಳೆ ಎಚ್ಚೆತ್ತ ಮಾವುತರು, ಕಾವಾಡಿಗರು ಭಾರೀ ಅನಾಹುತ ತಪ್ಪಿಸಿದ್ದಾರೆ. ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿ ಜನರು ಓಡಿದ್ದಾರೆ. ಕೂಡಲೇ ಎಚ್ಚೆತ್ತ ಮಾವುತರು ಹಾಗೂ ಕಾವಾಡಿಗರು ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ. 

img
Author

Post a comment

No Reviews