ಒಬ್ಬ ಚಹಾ ಮಾರುವ ವ್ಯಕ್ತಿ ಇಂದು ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರೇ ನೋಡಿ ನರೇಂದ್ರ ಮೋದಿ. ಪ್ರಧಾನಿ ಎಂದಾಕ್ಷಣ ಅದೊಂದು ದೊಡ್ಡ ಹುದ್ದೆ ಆ ಹುದ್ದೆಯಲ್ಲಿ ಸಾಕಷ್ಟು ವೇತನ ಇರುತ್ತದೆ ಅವರು ಸಾಕಷ್ಟು ಹಣ ಮಾಡಿರುತ್ತಾರೆ ಎಂಬ ಕಲ್ಪನೆ ನಮ್ಮಲ್ಲಿ ಮೂಡುವುದು ಸಹಜ. ಇದರ ನಡುವೆ ನಮ್ಮ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಎಷ್ಟು ಆಸ್ತಿ ಮಾಡಿದ್ದಾರೆ ಅವರ ಚಿರಾಸ್ಥಿ ಎಷ್ಟು ಚರಾಸ್ಥಿ ಎಷ್ಟು ಎಂಬ ಕುತೂಹಲ ನಮಗೆ ಇದ್ದೇ ಇರುತ್ತದೆ. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.
ಇಲ್ಲಿದೆ ನೋಡಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಆಸ್ತಿ ವಿವರ
ಮೋದಿ ಗುಜರಾತ್ ನಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿ ಹಾಗೆಯೇ 2 ಬಾರಿ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದವರು, ಅವರ ಈ ಸುದೀರ್ಘ ರಾಜಕೀಯ ಸೇವೆ ಯಲ್ಲಿ ಆನೇಕ ಏರಿಳಿತಗಳನ್ನು ಕಂಡಿದ್ದಾರೆ. ರಾಜಕೀಯ ವಲಯದಲ್ಲಿ ಜನಪ್ರಿಯ ವ್ಯಕ್ತಿಗಳಲೊಬ್ಬರಾದ ಪ್ರಧಾನಿ ಮೋದಿಯವರು ತಮ್ಮ ಒಟ್ಟು ಆಸ್ತಿ 3.02 ಕೋಟಿ ರೂಪಾಯಿ ಎಂದು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ವಾರಣಾಸಿಯಿಂದ ಲೋಕಸಭಾ ಕ್ಷೇತ್ರದಿಂದ ಮೋದಿಯವರು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಆಸ್ತಿಯ ವಿವರ ಹೀಗಿದೆ.
ನರೇಂದ್ರ ಮೋದಿ ಒಟ್ಟಾರೆಯಾಗಿ 3.02 ಕೋಟಿ ಆಸ್ತಿ ಹೊಂದಿರುವುದಾಗಿ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. 2019 ಕ್ಕೆ ಹೋಲಿಸಿದರೆ ಈ ಬಾರಿ ಮೋದಿ ಆಸ್ತಿಯಲ್ಲಿ ಕೊಂಚ ಏರಿಕೆ ಕಂಡಿದೆ. ಅಂದರೆ ಮೋದಿ ಆಸ್ತಿ ಕಳೆದ ಬಾರಿಗಿಂತ 50 ಲಕ್ಷ ರೂ ಹೆಚ್ಚಾಗಿದೆ. ಹಾಗೆಯೇ ಮೋದಿಯವರು ತಮ್ಮ ಬಳಿ ಕಾರು ಮನೆ ಷೇರು ಸೇರಿದಂತೆ ಯಾವುದೇ ಸ್ಥಿರಾಸ್ತಿ ಇಲ್ಲ ಎಂದು ಘೋಷಿಸಿದ್ದಾರೆ,
ಪ್ರಸ್ತುತ ನರೇಂದ್ರ ಮೋದಿಯವರ ಕೈಯಲ್ಲಿ 52,920 ನಗದು ಇದ್ದು, ಗುಜರಾತ್ ನಲ್ಲಿದ್ದ ನಿವೇಷನದ ಹಕ್ಕನ್ನು ಮೋದಿ ದಾನ ಮಾಡಿದ್ದಾರೆ, ಇಷ್ಟಾದರೂ ಮೋದಿ ಬಳಿ ಒಂದೇ ಒಂದು ವಾಹನ ಇಲ್ಲದಿರುವುದು ವಿಶೇಷ. ನರೇಂದ್ರ ಮೋದಿ ಬಳಿ 2.85 ಕೋಟಿ ನಿಶ್ಚಿತ ಠೇವಣಿ ಇದ್ದು, 9.12 ಲಕ್ಷ ರೂಪಾಯಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ ಹೂಡಿಕೆ ಮಾಡಿದ್ದಾರೆ.
ಮೋದಿಯ ಬಳಿ ಇದೆ 4 ಚಿನ್ನದ ಉಂಗುರ
ಪ್ರಧಾನಿ ನರೇಂದ್ರ ಮೋದಿ ಬಳಿ ನಾಲ್ಕು ಚಿನ್ನದ ಉಂಗರಗಳಿದ್ದು, ಇದರ ಬೆಲೆ 2 ಲಕ್ಷದ 67 ಸಾವಿರದ 750 ರೂಪಾಯಿಯಾಗಿದೆ.
Post a comment
Log in to write reviews