ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣನನ್ನು ಶುಕ್ರವಾರ ಎಸ್‌ಐಟಿ ತೀವ್ರ ತನಿಖೆ ನಡೆಸಲಿದೆ.
ಬೆಳಿಗ್ಗೆ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಿದ್ದಾರೆ. ನ್ಯಾಯಾಲಯ ಏನಾದರೂ ಎಸ್‌ಐಟಿ ಕಸ್ಟಡಿಗೆ ನೀಡಿದ್ದಲ್ಲಿ ಪಜ್ವಲ್ ನನ್ನು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಲಿದ್ದಾರೆ.
ಮೊದಲಿಗೆ ಪ್ರಜ್ವಲ್ ವಿರುದ್ಧ ದಾಖಲಾದ ಮೂರು ಪ್ರಕರಣಗಳ ಬಗ್ಗೆ ಅಧಿಕಾರಿಗಳು ಪ್ರಜ್ವಲ್‌ಗೆ ಮಾಹಿತಿ ನೀಡಲಿದ್ದಾರೆ. ನಂತರ ಸಂತ್ರಸ್ತೆಯರು ಹೇಳಿಕೆಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿ ಹಾಸನದಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.
ಇದಾದ ನಂತರ ಅಧಿಕಾರಿಗಳು ಅಶ್ಲೀಲ ವಿಡಿಯೋ ಬಗ್ಗೆ ವಿಚಾರಿಸಿ ವಿಡಿಯೋದಲ್ಲಿ ಇರುವ ವ್ಯಕ್ತಿ ಯಾರು? ವಿಡಿಯೋ ರೆಕಾರ್ಡ್ ಮಾಡಿದ್ದು ಯಾರು ಎಂದು ಪ್ರಶ್ನಿಸಲಿದ್ದಾರೆ. ವಿಡಿಯೋಗಳು ವೈರಲ್ ಅಗಿದ್ದು ಹೇಗೆ ? ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಯಾವುದು ? ರೆಕಾರ್ಡ್ ಮಾಡಿದ ಮೊಬೈಲ್ ಫೋನ್ ನಿಮ್ಮದೇನಾ ? ನಿಮ್ಮ ಮೊಬೈಲ್ ಫೋನ್ ಯಾರಾದರೂ ತೆಗೆದುಕೊಂಡಿದ್ದರಾ ಎನ್ನುವ ಪ್ರಶ್ನೆಯನ್ನು ಅಧಿಕಾರಿಗಳು ಪ್ರಜ್ವಲ್ ಮುಂದಿಡಲಿದ್ದಾರೆ. ನಂತರ ಕಾರು ಚಾಲಕ ಕಾರ್ತಿಕ್ ಬಳಿ ಇಷ್ಟು ಪ್ರಮಾಣದ ವಿಡಿಯೋಗಳು ಬಂದಿದ್ದು ಹೇಗೆ ಎಂಬುದರ ಬಗ್ಗೆ ವಿಚಾರಿಸಲಿದ್ದಾರೆ ಎನ್ನಲಾಗಿದೆ.
ಇದಾದ ನಂತರ ಪ್ರಕರಣಕ್ಕೆ ತಾಳೆ ಹಾಕುವ ಅಧಿಕಾರಿಗಳು ಪ್ರಜ್ವಲ್‌ಗೆ ಸಂಬಂಧಿಸಿದ ವಶಪಡಿಸಿಕೊಳ್ಳಲಾದ ವಸ್ತುಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಇದರೊಂದಿಗೆ ವಿದೇಶಕ್ಕೆ ತೆರಳಿದ್ದ ವಿಚಾರಣೆ ನಡೆಸಲಿರುವ ಅಧಿಕಾರಿಗಳು, ದೇಶ ಬಿಟ್ಟ ದಿನದಿಂದ ವಾಪಾಸ್ ಬರುವವರೆಗೆ ಸಹಾಯ ಮಾಡಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಲಿದೆ.
ಪ್ರಜ್ವಲ್ ವಿರುದ್ಧ ಇರುವ ಸಾಕ್ಷ್ಯಗಳೇನು..?
ಕೆಲವು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದು ವರ್ಷಗಳೇ ಕಳೆದಿದೆ ಎನ್ನಲಾಗಿದೆ. ಕೆಲವು ಪ್ರಕರಣದಲ್ಲಿ ಸಾಕ್ಷ್ಯ ಕಲೆ ಹಾಕುವುದು ಕಷ್ಟವಾಗಬಹುದು. ಕೇವಲ ಆರೋಪ, ದೂರನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಾಗದಿರಬಹುದು. ಪ್ರಕರಣ ಸಂಬಂಧ ವಿಡಿಯೋ ಮಾಡಿರುವ ಮೊಬೈಲ್ ಪತ್ತೆ ಆಗಬೇಕು. ಅಷ್ಟೇ ಅಲ್ಲದೆ ಅದೇ ಮೊಬೈಲ್ ಅಲ್ಲಿ ವಿಡಿಯೋ ಇರಬೇಕು ಅಥವಾ ಡಿಲಿಟ್ ಮಾಡಿರುವುದನ್ನು ರಿಟ್ರೀವ್ ಮಾಡಬೇಕು. ಮೊಬೈಲ್ ನಲ್ಲಿ ಚಾಟ್ ಮತ್ತು ವಿಡಿಯೋ ಕಾಲ್ ಮಾಡಿದ್ದಲ್ಲಿ ಇದರ ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಬೇಕಾಗುತ್ತದೆ.
Post a comment
Log in to write reviews