HSRP ನೋಂದಣಿಗೆ ವಾಹನ ಸವಾರರು ನಿರಾಸಕ್ತಿ ತೋರಿಸುತ್ತಿದ್ದು, ಕರ್ನಾಟಕದಲ್ಲಿನ 2 ಕೋಟಿ ವಾಹನಗಳ ಪೈಕಿ 36 ಲಕ್ಷ ವಾಹನಗಳಿಗೆ ಮಾತ್ರ ಈವರೆಗೆ ನೋಂದಣಿ ಮಾಡಲಾಗಿದೆ.
HSRP ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳಲು ಎರಡು ಬಾರಿ ಗಡುವು ವಿಸ್ತರಣೆ ಮಾಡಿದ್ದರೂ ಸಹ ವಾಹನ ಮಾಲೀಕರು ನಂಬರ್ ಪ್ಲೆಟ್ ಬದಲಾವಣೆಗೆ ಆಸಕ್ತಿ ತೋರಿಸುತ್ತಿಲ್ಲ.
ನಿಯಮ ಪ್ರಕಾರ ಮೇ 31ರ ಒಳಗೆ ಅಳವಡಿಸಿಕೊಳ್ಳದೆ ಇದ್ದರೆ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಲಿದೆ. ವಾಹನಗಳ ಮಾಲೀಕರ ನೀರಸ ಪ್ರತಿಕ್ರಿಯೆ ನೋಡಿ ಸರ್ಕಾರಕ್ಕೆ RTO ಅಧಿಕಾರಿಗಳು ಪತ್ರ ಬರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯದ ಶೇ. 18ರಷ್ಟು ವಾಹನಗಳಿಗೆ ಈವರೆಗೆ HSRP ಅಳವಡಿಕೆ ಮಾಡಲಾಗಿದ್ದು, ಇನ್ನೂ 1.64 ಕೋಟಿ ವಾಹನಗಳಿಗೆ ಹೊಸ ಫಲಕ ಅಳವಡಿಕೆಯಾಗಿಲ್ಲ. ಆದರೆ ಮೇ 31 ರಂದು ಮೂರನೇ ಬಾರಿಗೆ ಕೊಟ್ಟ ಗಡುವು ಅಂತ್ಯವಾಗಲಿದೆ.
ನಿಯಮ ಪ್ರಕಾರ ಮೇ 31ರ ಒಳಗೆ ಅಳವಡಿಸಿಕೊಳ್ಳದೆ ಇದ್ದರೆ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಲಿದೆ. ವಾಹನಗಳ ಮಾಲೀಕರ ನೀರಸ ಪ್ರತಿಕ್ರಿಯೆ ನೋಡಿ ಸರ್ಕಾರಕ್ಕೆ RTO ಅಧಿಕಾರಿಗಳು ಪತ್ರ ಬರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಮೇ 31ರ ನಂತರ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ಮೊದಲ ಬಾರಿ 500 ರೂಪಾಯಿ ದಂಡ, ಎರಡನೇ ಬಾರಿಗೆ ಒಂದು ಸಾವಿರ ವಿಧಿಸಲಾಗುತ್ತದೆ. ಅಲ್ಲದೇ, ಮುಂದೆ ಸಿಕ್ಕಿಬೀಳುವ ಪ್ರತಿ ಬಾರಿಗೆ 1 ಸಾವಿರ ದಂಡ ಕಟ್ಟುತ್ತಾ ಹೋಗಬೇಕು ಎಂಬ ನಿಯಮವಿದೆ.
ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗಿರುತ್ತೆ.
Post a comment
Log in to write reviews