ಹುಬ್ಬಳ್ಳಿ-ಸೊಲ್ಲಾಪುರ, ಬೆಂಗಳೂರು ಮಾರ್ಗ ರೈಲುಗಳ ಸಂಚಾರ ಸಮಯ ಬದಲಾವಣೆ !
ಹುಬ್ಬಳ್ಳಿ: ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್ ಸೇರಿಂದತೆ ರಾಜ್ಯದ ಒಂಬುತ್ತು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಸಮಯ ಬದಲಾವಣೆಯನ್ನುಮುಂದಿನ ವಾರ ಜಾರಿಗೆ ಬರಲಿದೆ. ಇನ್ನು ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ಸೂರತ್‌ನ ಉಧ್ನಾದಿಂದ ವಿಶೇಷ ರೈಲು ಬಿಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಹುಬ್ಬಳ್ಳಿ-ಸೊಲ್ಲಾಪುರ, ಹುಬ್ಬಳ್ಳಿ-ನರಸಾಪುರ, ಅಮರಾವತಿ ಎಕ್ಸ್‌ಪ್ರೆಸ್, ದಾದರ್-ಮೈಸೂರು ಶರಾವತಿ ವೀಕ್ಲಿ ಎಕ್ಸ್‌ಪ್ರೆಸ್, ಅಜಮೀ ರ್ಮೈಸೂರು ವೀಕ್ಲಿ ಎಕ್ಸಪ್ರೆಸ್, ಜೋದಪುರ-ಕೆಎಸ್ಆರ್ ವೀಕ್ಲಿ ಎಕ್ಸ್‌ಪ್ರೆಸ್, ಗಾಂಧಿದಾಮ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್, ದಾದರ್-ಪಾಂಡಿಚೇರಿ ವೀಕ್ಲಿ ಎಕ್ಸ್‌ಪ್ರೆಸ್, ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಮತ್ತು ದಾದರ್-ತಿರುನೆಲ್ವೇಲಿ ವೀಕ್ಲಿ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಯಾಗಲಿದೆ.
ರೈಲುಗಳ ಬದಲಾದ ಸಮಯ:
1. ರೈಲು ಸಂಖ್ಯೆ 07332: ಎಸ್ಎಸ್ಎಸ್ ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್ ರೈಲು ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 1:15ಕ್ಕೆ ಹೊರಡಲಿದೆ.
2. ರೈಲು ಸಂಖ್ಯೆ 17226: ಎಸ್ಎಸ್ಎಸ್ ಹುಬ್ಬಳ್ಳಿ-ನರಸಾಪುರ ಅಮರಾವತಿ ಎಕ್ಸ್‌ಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ಹೊರಡಲಿದೆ.
3. ರೈಲು ಸಂಖ್ಯೆ 11005: ದಾದರ್-ಪಾಂಡಿಚೇರಿ ವೀಕ್ಲಿ ಎಕ್ಸಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
4. ರೈಲು ಸಂಖ್ಯೆ 11035: ದಾದರ್-ತಿರುನೆಲ್ವೇಲಿ ವೀಕ್ಲಿ ಎಕ್ಸ್‌ಪ್ರೆಸ್ ಜು.15 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
5. ರೈಲು ಸಂಖ್ಯೆ 11035: ಮೈಸೂರು-ಶರಾವತಿ ವೀಕ್ಲಿ ಎಕ್ಸ್‌ಪ್ರೆಸ್ ಜು.18 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12:05ಕ್ಕೆ ಅಥವಾ 12:15ಕ್ಕೆ ಹೊರಡಲಿದೆ.
6. ರೈಲು ಸಂಖ್ಯೆ 16209: ಅಜ್ಮೀರ್-ಮೈಸೂರು ವೀಕ್ಲಿ ಎಕ್ಸ್‌ಪ್ರೆಸ್ ಜು.19 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ಹೊರಡಲಿದೆ.
7. ರೈಲು ಸಂಖ್ಯೆ 16507: ಜೋದಪುರ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ಜುನ್.18 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ನಿರ್ಗಮಿಸಲಿದೆ.
8. ರೈಲು ಸಂಖ್ಯೆ 16505: ಗಾಂಧಿಧಾಮ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ಜುನ್.16 ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 2:00 ಗಂಟೆ ಅಥವಾ 02:15ಕ್ಕೆ ನಿರ್ಗಮಿಸಲಿದೆ.
9. ರೈಲು ಸಂಖ್ಯೆ 20656: ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ಜುನ್.20 ರಿಂದ ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಡಲಿದೆ.
Post a comment
Log in to write reviews