ಮೇ 24 ರಂದು ಎಂ ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್ ಭರ್ಜರಿ ಗೆಲುವನ್ನು ದಾಖಲಿಸಿತು. ಈ ಮೂಲಕ ಕೆಕೆಅರ್ ನೊಂದಿಗೆ ಸೆಣೆಸಾಡಲು ಹೈದರಾಬಾದ್ ಫೈನಲ್ಗೆ ಲಗ್ಗೆಇಟ್ಟಿತು.
ರಾಜಸ್ಥಾನ್ ರಾಯಲ್ಸ್ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ದು ಕೊಂಡಿತ್ತು. ಇತ್ತ ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ರಾಜಸ್ಥಾನ್ ಗೆ ನಿಗದಿತ 20 ಓವರ್ ಗೆ 175 ರನ್ ಗಳ ಟಾರ್ಗೆಟ್ ಅನ್ನು ನೀಡಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ 20 ಓವರ್ ಗೆ 139 ರನ್ ಗಳಿಸಲು ಶಕ್ತವಾಗಿದೆ. ಇದರ ಮೂಲಕ ಹೈದರಾಬಾದ್ ರಾಜಸ್ಥಾನ್ ವಿರುದ್ಧ 36 ರನ್ ಗಳ ಅಂತರದಿಂದ ಜಯ ದಾಖಲಿಸಿತು.
ಮೇ 26 ರಂದು ಐಪಿಎಲ್ ಅಂತಿಮ ಪಂದ್ಯ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಇದರ ಮೂಲಕ ಕೊಲ್ಕತ್ತಾ ಮೂರನೇ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ ಹೈದರಾಬಾದ್ ಎರಡನೇ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಬಾರಿ ಐಪಿಎಲ್ ಕಪ್ ಯಾರ ಪಾಲಿಗೆ ಸೇರಬಹುದು ಎಂದು ಕಾದು ನೋಡಬೇಕಿದೆ.
Post a comment
Log in to write reviews