ನಾನು ಹೆದರಿ ವಿದೇಶಕ್ಕೆ ಹೋಗಿಲ್ಲ : ತನಿಖೆ ಎದುರಿಸಲು ನಾನು ರೆಡಿ : ಬಂದೇ ಬರುತ್ತೇನೆ - ಪ್ರಜ್ವಲ್ ರೇವಣ್ಣ.
ಪೆನ್ ಡ್ರೈವ್ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷನಾಗಿದ್ದಾನೆ. ಬರೊಬ್ಬರಿ ಒಂದು ತಿಂಗಳ ನಂತರ ಅಜ್ಞಾತ ಸ್ಥಳದಿಂದ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ ರಾಜ್ಯದ ಜನತೆಗೆ ಕ್ಷಮೆ ಕೇಳಿದ್ದಾನೆ.
ವಿಡಿಯೋ ಮುಖಾಂತರ ಪ್ರಜ್ವಲ್ ತನ್ನ ಅಜ್ಜ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಹಾಗು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಬಳಿ ಕ್ಷಮೆ ಕೇಳಿದ್ದಾನೆ. ವಿದೇಶ ಪ್ರವಾಸ ತಿಂಗಳ ಹಿಂದೆ ನಿಧಾ೯ರವಾಗಿತ್ತು ನಾನು ವಿದೇಶಕ್ಕೆ ಬಂದ ನಂತರ ಈ ವಿಚಾರ ತಿಳಿದಿದ್ದು ಇದೊಂದು ರಾಜಕೀಯ ಪೀತೂರಿ ಎಂದು ಪ್ರಜ್ವಲ್ ಹೇಳಿದ್ದಾನೆ. ಇದೇ ತಿಂಗಳು ಮೇ31ರಂದು ನಾನು SIT ಮುಂದೆ ಹಾಜಾರಾಗುತ್ತೇನೆ ತನಿಖೆ ಎದರಿಸುತ್ತೇನೆ. ಪೊಲೀಸರಿಗೆ ಈ ಕುರಿತು ಸಂಪೂಣ೯ ಸಹಕಾರ ನೀಡುತ್ತೇನೆಂದು ತಿಳಿಸಿದ್ದಾನೆ ದೇಶದ ಕಾನೂನಿನ ಮೇಲೆ ಗೌರವವಿದ್ದು ವಿದೇಶದಿಂದ ಬಂದು ಪೊಲೀಸರ ಮುಂದೆ ಹಾಜರಾಗುತ್ತೇನೆ ಎಂದಿದ್ದಲ್ಲದೆ ಜೆಡಿಎಸ್ ಕಾರ್ಯಕರ್ತರ ಬಳಿ ಕ್ಷಮೆ ಕೇಳಿದ್ದಾನೆ. ಹಾಸನದ ರಾಜಕಾರಣಿಗಳು ನನ್ನ ವಿರುಧ್ಧ ಪಿತೂರಿ ಮಾಡಿದ್ದು ಚುನಾವಣೆ ನಡೆದ ನಂತರ ಕೇಸು ದಾಖಲಾಗಿತ್ತು. ವಿದೇಶಕ್ಕೆ ಬಂದ ನಂತರ ಯೂ ಟ್ಯೂಬ್ ನೋಡುವಾಗ ಇದರ ಮಾಹಿತಿ ನನಗೆ ತಿಳಿದಿದ್ದು ನನಗೆ ಮತ್ತು ನನ್ನ ಕುಟುಂಬಕ್ಕೆ ಆದ ಅವಮಾನದಿಂದ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಇದೊಂದು ಸುಳ್ಳು ಪ್ರಕರಣವಾಗಿದ್ದು ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ವಿರೋಧಿಗಳು ಪಿತೂರಿ ನಡೆಸಿದ್ದಾರೆ ಎಂದು ಪ್ರಜ್ವಲ್ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
Post a comment
Log in to write reviews